Karnataka NewsLatestPolitics
*ಕೆ.ಹೆಚ್.ಮುನಿಯಪ್ಪ ಸಿಎಂ ಆದರೆ ಸ್ವಾಗತ ಎಂದ ಪರಮೇಶ್ವರ್; ಕುತೂಹಲ ಮೂಡಿಸಿದ ಗೃಹ ಸಚಿವರ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರ ಎರಡುವರೆ ವರ್ಷ ಪೂರೈಸುತ್ತಿರುವ ಹೊತ್ತಲ್ಲೇ ನಾಯಕತ್ವ ಬದಲಾವಣೆ ವಿಚಾರ ಭಾರಿ ಚರ್ಚೆಗೆ ಬರುತ್ತಿದೆ. ಈ ಸಂದರ್ಭದಲ್ಲೇ ಕೆ.ಹೆಚ್.ಮುನಿಯಪ್ಪ ಸಿಎಂ ಆದರೆ ಸ್ವಾಗತ ಮಾಡುತ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಮುನಿಯಪ್ಪ ಸಿಎಂ ಆದರೆ ಸಂತೋಷ. ಅವರು ಏಳು ಬಾರಿ ಎಂಪಿ ಆದವರು. ಕಾಂಗ್ರೆಸ್ ನ ಹಿರಿಯ ನಾಯಕರು, ಸಮರ್ಥರು ಹಾಗೂ ಅರ್ಹರಿದ್ದಾರೆ. ಹಾಗಾಗಿ ಅವರು ಮುಖ್ಯಮಂತ್ರಿಯಾದರೆ ಸಂತೋಷಪಡುತ್ತೇನೆ ಎಂದರು.
ತುಳಿತಕ್ಕೊಳಗಾಗಿರುವ ವರ್ಗಕ್ಕೆ ಆಡಳಿತ ಸಿಗಬೇಕು. ಅಂತಹ ವರ್ಗಕ್ಕೆ ಆಡಳಿತ ಸಿಗುತ್ತದೆ ಅಂದರೆ ಸಂತೋಷ. ಅವರು ಕೂಡ ಅಂತಹ ವರ್ಗದಿಂದ ಬಂದ ನಾಯಕರಾಗಿದ್ದಾರೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




