7 ಕೇಸ್ ಹಾಕಿದರೂ ಕಲಿಯಲಿಲ್ಲ ಬುದ್ದಿ
ಪ್ರಗತಿ ವಾಹಿನಿ, ಬೆಳಗಾವಿ –
ಬೆಳಗಾವಿ ನಗರದಲ್ಲಿ ಸಾರ್ವಜನಿಕರಿಗೆ ಓಸಿ, ಜೂಜು ಆಡಲು ಪ್ರೇರೇಪಿಸುತ್ತಿದ್ದ ಅಪರಾಧಿ ಆನಗೋಳದ ಪರಶುರಾಮ ಬಾಬು ಮೇತ್ರಿ ಎಂಬುವವನ್ನು 2022 ರ ಸೆಪ್ಟೆಂಬರ್ 19 ರಿಂದ 2023 ರ ಸೆ. 18 ರವರೆಗೆ 1 ವರ್ಷದ ಅವಧಿಗೆ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಿ ಬೆಳಗಾವಿ ಡಿಸಿಪಿ ರವೀಂದ್ರ ಕೆ ಗಡಾದಿ ಆದೇಶ ಹೊರಡಿಸಿದ್ದಾರೆ.
ಪರಶುರಾಮ ಬಾಬು ಮೇತ್ರಿಯ ಮೇಲೆ ಈಗಾಗಲೇ 7 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 4 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದೆ. ಆದರೂ ಸಹ ಈತ ಸಾರ್ವಜನಿಕರಿಗೆ ಓ.ಸಿ ಆಟ ಆಡಿಸುವದನ್ನು ಮುಂದುವರೆಸಿದ್ದ.
ಇವನಿಗೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಸಹ ಇವನು ತನ್ನ ಕಾನೂನುಬಾಹಿರ ಚಟುವಟಿಕೆಗಳನ್ನು ಮುಂದುವರೆಸಿದ್ದರಿಂದ ಗಡಿಪಾರು ಮಾಡಿ ಆದೇಶಿಸಲಾಗಿರುತ್ತದೆ. ಈ ಮೂಲಕ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುವ ಸಮಾಜಘಾತುಕರಿಗೆ ಎಚ್ಚರಿಕೆ ನೀಡಿದಂತಾಗಿದೆ.
https://pragati.taskdun.com/politics/bjp-congress-set-platform-for-big-change-what-is-read-this-news/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ