Latest

ಈಗಲೂ ಹೇಳುತ್ತೇನೆ ನನ್ನ ಮಗನದ್ದು ಸಹಜ ಸಾವಲ್ಲ, ಕೊಲೆ; ಪರೇಶ್ ಮೇಸ್ತ ತಂದೆ ಕಣ್ಣೀರು

ಪ್ರಗತಿವಾಹಿನಿ ಸುದ್ದಿ; ಕಾರವಾರ: ಪರೇಶ್ ಮೇಸ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ತನಿಖಾ ವರದಿ ತೃಪ್ತಿಕರವಾಗಿಲ್ಲ. ತನಿಖೆ ಬಗ್ಗೆ ಅಸಮಾಧಾನವಿದೆ ಎಂದು ಪರೇಶ್ ಮೇಸ್ತ ತಂದೆ ಕಮಲಾಕರ ಮೇಸ್ತ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಮಾತನಾಡಿದ ಕಮಲಾಕರ ಮೇಸ್ತ, ನನ್ನ ಮಗ ಪರೇಶ್ ಮೇಸ್ತ ಸಾವು ಸಹಜ ಸಾವಲ್ಲ. ಆದರೆ ಸಿಬೈ ಅಧಿಕಾರಿಗಳು ಇದು ಹತ್ಯೆಯಲ್ಲ, ಆಕಸ್ಮಿಕ ಸಾವು ಎಂದು ವರದಿ ನೀಡಿದ್ದಾರೆ. ಸಿಬಿಐ ತನಿಖಾ ವರದಿ ಬಗ್ಗೆ ಅಸಮಾಧಾನವಿದೆ. ನನಗೆ ಅನ್ಯಾಯವಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.

ನಾನು ಈಗಲೂ ಹೇಳುತ್ತಿದ್ದೇನೆ. ನನ್ನ ಮಗನದ್ದು ಸಹಜ ಸಾವಲ್ಲ. ಆತನನ್ನು ಕೊಲೆ ಮಾಡಿ ಬಳಿಕ ಸಾಕ್ಷ್ಯ ನಾಶಪಡಿಸಲಾಗಿದೆ. ಅಂದಿನ ಸರ್ಕಾರ ಅಂದಿನ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಆರೋಪಿಸಿದ್ದಾರೆ.

ಇಂದಿನ ಬಿಜೆಪಿ ಸರ್ಕಾರದ ಬಗ್ಗೆಯೂ ನನಗೆ ಅಸಮಾಧಾನವಿದೆ. ಪ್ರಕರಣದ ಬಗ್ಗೆ ಎನ್ ಐಎ ತನಿಖೆಯಿಂದ ಸತ್ಯ ಹೊರಬರಬೇಕು. ಮೂರು ವರ್ಷದ ಬಳಿಕ ಈಗ ಸಿಬಿಐ ಬಿ ರಿಪೋರ್ಟ್ ಹಾಕಿದೆ. ಪರೇಶ್ ಮೇಸ್ತನದ್ದು ಸಹಜ ಸಾವು ಎಂದರೆ ನಾನು ಒಪ್ಪಲ್ಲ. ಕುಟುಂಬಸ್ಥರು, ಮುಖಂಡರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

2017, ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದಿದ್ದ ಗಲಭೆ ವೇಳೆ ಹೊನ್ನಾವರದ ಮೀನುಗಾರ ಯುವಕ ಪರೇಶ್ ಮೇಸ್ತ ಕಾಣೆಯಾಗಿದ್ದ. ಬಳಿಕ ಡಿಸೆಂಬರ್ 8ರಂದು ಹೊನ್ನಾವರ ನಗರದ ಶನಿ ದೇವಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಪರೇಶ್ ಮೇಸ್ತನ ಶವ ಪತ್ತೆಯಾಗಿತ್ತು. ಘಟನೆ ಹೊನ್ನಾವರದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಗಿತ್ತು. ಪರೇಶ್ ಮೇಸ್ತನದ್ದು ಕೊಲೆ ಎಂಬ ಆರೋಪ ಕೇಳಿಬಂದಿತ್ತು. ಹಿಂದೂಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಇದೀಗ ಪ್ರಕರಣದ ತನಿಖೆ ನಡೆಸಿರುವ ಸಿಬಿಐ ಪರೇಶ್ ಮೇಸ್ತನದ್ದು ಆಕಸ್ಮಿಕ ಸಾವು ಕೊಲೆಯಲ್ಲ ಎಂದು ವರದಿ ನೀಡಿದೆ.

RSS ಮುಖಂಡರಿಗೆ ಎಚ್ಚರಿಕೆ ನೀಡಿದ PFI

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button