Karnataka NewsLife Style

*ಪರ್ಣ ಪಶ್ಚಿಮ ಘಟ್ಟ ರೈತೋತ್ಪಾದಕ ಕಂಪನಿಯ ನೂತನ ಕಾರ್ಯಾಲಯ ಹಾಗೂ ಮಾರಾಟ ಮಳಿಗೆಯನ್ನು ಉದ್ಘಾಟಿಸಿದ ಪಂ. ಡಾ|| ಪ್ರವೀಣ್‌ ಗೋಡ್ಖಿಂಡಿ*

ಪಶ್ಚಿಮ ಘಟ್ಟದ ಹಸಿರು ಸಿರಿಗೆ ಬಾನ್ಸುರಿಯ ವಾದನ

ಪ್ರಗತಿವಾಹಿನಿ ಸುದ್ದಿ: ಪರ್ಣ ಪಶ್ಚಿಮ ಘಟ್ಟ ರೈತೋತ್ಪಾದಕ ಕಂಪನಿ ವಾನಳ್ಳಿ ಇದರ ನೂತನ ಕಾರ್ಯಾಲಯ ಹಾಗೂ ಮಾರಾಟ ಮಳಿಗೆಯನ್ನು ಪಂಡಿತ ಡಾ|| ಪ್ರವೀಣ್‌ ಗೋಡ್ಖಿಂಡಿಯವರು ರಾಂಪತ್ರೆ ಗಿಡಕ್ಕೆ ನೀರೆರೆಯುವುದರ ಮೂಲಕ ಹಾಗೂ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಡಾ|| ನರಸಿಂಹ ಹೆಗಡೆಯವರು ಪಶ್ಚಿಮ ಘಟ್ಟದ ಉಪವನ ಉತ್ಪನ್ನಗಳು ಹಾಗೂ ಅವುಗಳ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.


ಸ್ಥಾನಿಕವಾಗಿ ದೊರೆಯುವ ಹಾಗು ನೈಸರ್ಗಿಕ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ವಿಶೇಷವಾದ ಪ್ರಯತ್ನವನ್ನು ಶ್ಲಾಘಿಸಿದರು. ತಾವು ಬೆಂಗಳೂರಿನಲ್ಲಿ ತಮ್ಮ ಸಂಪರ್ಕದಲ್ಲಿರುವವರಿಗೆ ಈ ಉತ್ಪನ್ನಗಳ ಮಾರಾಟದ ವ್ಯವಸ್ಥೆಗೆ ಸಹಾಯ ನೀಡುವುದಾಗಿ ಅಭಯ ನೀಡಿದರು. “ಝೀರೋ ಮಾರ್ಜಿನ್‌ ಕಾನ್ಸೆಪ್ಟ್‌” ಎಂಬ ನೂತನ ವಿಷಯದ ಬಗ್ಗೆ ತಿಳಿಸಿ ಇದು ರೈತರಿಗೆ ತಮ್ಮ ಉತ್ಪನ್ನಗಳನ್ನು ಯಾವುದೇ ಮಧ್ಯವರ್ತಿಗಳ ಅವಶ್ಯವಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸುವ ವೇದಿಕೆಯಾಗಿದ್ದು, ಇದರ ಸಂಪೂರ್ಣ ಲಾಭಾಂಶ ರೈತರಿಗೆ ದೊರೆಯಲಿದೆ ಎಂದು ತಿಳಿಸಿದರು.


ಈ ಸಮಯದಲ್ಲಿ ಪಂ. ಕಿರಣ್‌ ಗೋಡ್ಖಿಂಡಿ, ಎನ್.ಎಸ್ ಹೆಗಡೆ ಕೋಟಿಕೊಪ್ಪ, ಕಂಪನಿಯ ನಿರ್ದೇಶಕರುಗಳು,ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Home add -Advt


ಕಂಪನಿಯ ನೂತನ ಮಾರಾಟ ಮಳಿಗೆಯಲ್ಲಿ ಶುದ್ಧ ಜೇನುತುಪ್ಪ, ಮೀಸರಿ ತುಪ್ಪ, ಮರದ ಗಾಣದ ಶೇಂಗಾ ಎಣ್ಣೆ, ಕೊಬ್ಬರಿ ಎಣ್ಣೆ ಹಾಗು ಎಳ್ಳೆಣ್ಣೆ, ಕೋಕಂ, ಲವಂಗ, ಕಾಳುಮೆಣಸು, ಅರಿಶಿಣ, ವಾಟೆ ಪುಡಿ, ಶುಂಠಿ ಕಾಫಿ,ಸಣ್ಣ ಮೆಣಸು,ಆಮ್ಲ ಕ್ಯಾಂಡಿ, ಪಪಾಯ ಕ್ಯಾಂಡಿ, ಅಡಿಕೆ ಹಾಳೆಯ ಪ್ಲೇಟುಗಳು, ಹಾಗು ಮುಂತಾದ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿದ್ದವು.


ನಂತರದಲ್ಲಿ ಪಶ್ಚಿಮ ಘಟ್ಟ ಜೀವ ವಿಸ್ಮಯ ಕುರಿತು ಸಮಗ್ರ ಮಾಹಿತಿ ಪತ್ರಿಕೆಯ ಎರಡನೇ ಭಾಗವನ್ನು ಬಿಡುಗಡೆಗೊಳಿಸಲಾಯಿತು. ಸುಮಾರು ಎರಡು ವರೆ ಘಂಟೆಗಳ ಕಾಲ ಅದ್ಭುತವಾಗಿ ಬಾನ್ಸುರಿ ನುಡಿಸಿದ ಪಂಡಿತ್ ಪ್ರವೀಣ್ ಗೋಡ್ಖಿಂಡಿಯವರು ರಾಗ್ ಯಮನ್, ರಾಗ್ ರಾಗಶ್ರೀ, ರಾಗಮಾಲಿಕೆ, ಸರಸ್ವತಿ ಕೊನೆಯಲ್ಲಿ ಭೈರವಿ ರಾಗವನ್ನು ನುಡಿಸಿ ಪ್ರೇಕ್ಷಕರನ್ನು ರಂಜಿಸಿದರು.


ತಬಲಾದಲ್ಲಿ ಪಂ.ಕಿರಣ ಗೋಡ್ಖಿಂಡಿಯವರು ಸಾಥ್‌ ನೀಡಿದರು. ಮೆಣಸಿ ಸೀಮೆಯ ಕಲಾಸಕ್ತರಲ್ಲದೆ, ಸುತ್ತಮುತ್ತಲಿನ ಕಲಾಸಕ್ತರು ಮಳೆಯನ್ನೂ ಲೆಕ್ಕಿಸದೆ ಬಂದಿದ್ದು ವಿಶೇಷವಾಗಿತ್ತು.

Related Articles

Back to top button