ಪ್ರಗತಿವಾಹಿನಿ ಸುದ್ದಿ; ನವದೆಹಲಿ: ನಾಲ್ಕನೇ ಹಂತದ ಲಾಕ್‌ಡೌನ್ ಸಡಿಲಿಕೆಯ ಭಾಗವಾಗಿ ಭಾರತೀಯ ರೈಲ್ವೆ ಪ್ರಯಾಣಿಕ ರೈಲು ಸೇವೆಯನ್ನು ಪ್ರಾರಂಭಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರಯಾಣಿಕರು ಅನುಸರಿಸಬೇಕಾದ ಮಾರ್ಗಸೂಚಿಗಳು ಹಾಗೂ ಹೊಸ ರೈಲು ರೂಟ್‌ಗಳನ್ನು ಬಿಡುಗಡೆಗೊಳಿಸಲಾಗಿದೆ.
ಜೂನ್ 1ರಂದು ರೈಲು ಸೇವೆಯನ್ನು ಆರಂಭಿಸಲು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೇಂದ್ರ ಗೃಹ ಇಲಾಖೆ ನಿರ್ಧರಿಸಿದೆ. ಒಟ್ಟು 200 ಜೊತೆ ರೈಲುಗಳು ಓಡಾಟವನ್ನು ನಡೆಸಲಿದೆ. ಇದು ಶ್ರಮಿಕ ರೈಲುಗಳ ಹೊರತಾದ ಹೆಚ್ಚುವರಿ ರೈಲು ಸೇವೆಯಾಗಿರಲಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
ಇದರಲ್ಲಿ ಮುಂಬಯಿ ಸಿಎಸ್‌ಟಿಯಿಂದ ಗದಗ, ಮುಂಬಯಿ ಸಿಎಸ್‌ಟಿಯಿಂದ ಕೆಎಸ್‌ಆರ್ ಬೆಂಗಳೂರು, ದಾಣಾಪುರದಿಂದ ಕೆಎಸ್‌ಆರ್ ಬೆಂಗಳೂರು, ಹೌರಾದಿಂದ ಯಶವಂತಪುರ ವರಗೆ ದುರಂತೊ, ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಯಶವಂತಪುರದಿಂದ ಶಿವಮೊಗ್ಗಗಳಿಗೆ ಜನಶತಾಬ್ದಿ ರೈಲು ಸೇವೆಗಳು ಆರಂಭವಾಗಲಿವೆ.
ರೈಲು ಮಾರ್ಗಸೂಚಿ:
* ಎಸಿ ಹಾಗೂ ನಾನ್ ಎಸಿ ಹೊಂದಿರುತ್ತದೆ.
* ಸಿಟ್ಟಿಂಗ್‌ಗಾಗಿ ಜನರಲ್ ರಿಸರ್ವ್ ಮಾಡಬಹುದಾಗಿದೆ.
* ಶ್ರಮಿಕ ರೈಲುಗಳನ್ನು ಹೊರತುಪಡಿಸಿ ಪ್ರಯಾಣಿಸಲು ಬಯಸುವ ಇತರೆ ವಲಸಿಗರಿಗೂ ಸಹಾಯ
* ಶುಲ್ಕ ಸಾಮಾನ್ಯವಾಗಿರುತ್ತದೆ. ಜನರಲ್ (ಜಿಎಸ್)ಕೋಚ್‌ಗಳಲ್ಲಿ ಸಿಟ್ಟಿಂಗ್ (2ಎಸ್) ಶುಲ್ಕವನ್ನು ವಿಧಿಸಲಾಗುತ್ತದೆ.
* 100 ಜೊತೆ ರೈಲುಗಳು
* ಮೇ 21 ಬೆಳಗ್ಗೆ 10 ಗಂಟೆಗೆ ಬುಕ್ಕಿಂಗ್ ಪ್ರಾರಂಭ
* ಇತರೆ ಪ್ರಯಾಣಿಕ ರೈಲುಗಳಾದ ಮೇಲ್/ಎಕ್ಸ್‌ಪ್ರೆಸ್, ಪ್ರಯಾಣಿಕ ಹಾಗೂ ಸಬರ್ಬನ್ ರೈಲುಗಳು ಓಡಾಡುವುದಿಲ್ಲ.
* ರೈಲಿನಲ್ಲಿ ಕಾಯ್ದಿರಿಸದ ಕೋಚ್‌ಗಳು ಇರುವುದಿಲ್ಲ. ಎಲ್ಲವೂ ರಿಸರ್ವ್ಡ್ ಕೋಚ್‌ಗಳು.
* IRCTC ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು.
* ರೈಲ್ವೆ ನಿಲ್ದಾಣ ಅಥವಾ ರಿಸರ್ವೇಷನ್ ಕೌಂಟರ್‌ನಲ್ಲಿ ಬುಕ್ಕಿಂಗ್ ಅವಕಾಶವಿರುವುದಿಲ್ಲ.
* 30 ದಿನಗಳಷ್ಟು ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು.
* ಟಿಕೆಟ್ ಇದ್ದವರಿಗೆ ಮಾತ್ರ ಪ್ರಯಾಣದ ಅವಕಾಶ.
* ರೈಲು ಹತ್ತುವ ಮುನ್ನ ಕೋವಿಡ್ ಸ್ಕ್ರೀನಿಂಗ್ ನಡೆಯಲಿದೆ.
* ರೋಗ ಲಕ್ಷಣ ಇಲ್ಲದ ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸುವ ಅವಕಾಶ.
* ಗಮ್ಯಸ್ಥಾನವನ್ನು ತಲುಪಿದ ಬಳಿಕ ಆಯಾ ರಾಜ್ಯ/ಕೇಂದ್ರಡಾಳಿತ ಪ್ರದೇಶ ಆರೋಗ್ಯ ಇಲಾಖೆ ಸೂಚಿಸಿರುವ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು.
* ಈಗಿನ ನಿಯಮ ಪ್ರಕಾರ ಆರ್‌ಎಸಿ ಹಾಗೂ ವೇಟ್ ಲಿಸ್ಟ್ ಜನರೇಟ್ ಮಾಡಲಾಗುದು. ಆದರೂ ವೇಟಿಂಗ್ ಲಿಸ್ಟ್‌ನಲ್ಲಿದ್ದವರಿಗೆ ಪ್ರಯಾಣಕ್ಕೆ ಅನುಮತಿಯಿರುವುದಿಲ್ಲ.
* ತತ್ಕಾಲ್ ಬುಕ್ಕಿಂಗ್ ಸೇವೆಯಿರುವುದಿಲ್ಲ.
* ಪ್ರತಿಯೊಬ್ಬ ಪ್ರಯಾಣಿಕನೂ ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸತಕ್ಕದ್ದು. ಪ್ರಯಾಣದ ಸಂದರ್ಭದಲ್ಲೂ ಫೇಸ್ ಮಾಸ್ಕ್ ಧರಿಸಬೇಕು.
* 90 ನಿಮಿಷಗಳಿಗೂ ಮೊದಲೇ ರೈಲು ನಿಲ್ದಾಣವನ್ನು ತಲುಪಬೇಕು.
* ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು.
* ನಾಲ್ಕು ವಿಭಾಗದ ದಿವ್ಯಾಂಗ್ಜನ್ ಹಾಗೂ 11 ವರ್ಗಗಳ ರೋಗಿಗಳಿಗೆ ವಿನಾಯಿತಿ ಅನುಮತಿಸಲಾಗಿದೆ.
* ರೈಲಿನಲ್ಲಿ ಕೇಟರಿಂಗ್ ಸೇವೆ ಇರುವುದಿಲ್ಲ. ಪ್ರಯಾಣಿಕರು ಅಗತ್ಯದ ಆಹಾರ ಹಾಗೂ ಕುಡಿಯುವ ನೀರನ್ನು ತರಬೇಕು.
* ರೈಲಿನಲ್ಲಿ ಕಂಬಳಿ ಒದಗಿಸಲಾಗುವುದಿಲ್ಲ. ಹಾಗಾಗಿ ಪ್ರಯಾಣಿಕರೇ ತರತಕ್ಕದ್ದು.
* ಪ್ರತಿಯೊಬ್ಬ ಪ್ರಯಾಣಿಕ ಆರೋಗ್ಯ ಸೇತು ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ ಬಳಸಬೇಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ