Latest

ಭಾರತ್ ಜೋಡೋ ಯಾತ್ರೆ; ಪೇಸಿಎಂ ಟಿ ಶರ್ಟ್ ಧರಿಸಿದ್ದ ಯುವಕನ್ನು ಥಳಿಸಿ ಟಿ ಶರ್ಟ್ ಬಿಚ್ಚಿಸಿದ ಪೊಲೀಸರು

ಪ್ರಗತಿವಾಹಿನಿ ಸುದ್ದಿ; ಮೈಸೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪಾದಯಾತ್ರೆ ಮೈಸೂರು ತಲುಪಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಧರಿಸಿದ್ದ ಪೇಸಿಎಂ ಟಿ ಶರ್ಟ್ನ್ನು ಪೊಲೀಸರು ಬಿಚ್ಚಿಸಿದ ಘಟನೆ ನಡೆದಿದೆ.

ಪೇಸಿಎಂ ಟಿ ಶರ್ಟ್ ಧರಿಸಿ ಬಾವುಟ ಹಿಡಿದು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಿಂಧಗಿಯ ಅಕ್ಷಯ್ ಎಂಬ ಯುವಕನನ್ನು ಪೊಲೀಸರು ಹಿಡಿದು ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಆತನ ಕೈಲಿದ್ದ ಬಾವುಟ ಕಿತ್ತುಕೊಂಡು, ಪೇಸಿಎಂ ಟಿ ಶರ್ಟ್ ಬಿಚ್ಚಿಸಿದ್ದಾರೆ. ಅಲ್ಲದೇ ಯುವಕನ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದಾರೆ.

ಪೇಸಿಎಂ ಟಿ ಶರ್ಟ್ ಧರಿಸಿದ್ದ ನಮ್ಮ ಕಾರ್ಯಕರ್ತನ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿರುವುದು ಖಂಡನೀಯ. ಟಿ ಶರ್ಟ್ ಬಿಚ್ಚಿಸಿ ರಸ್ತೆಯಲ್ಲಿ ಆತನ ಮೇಲೆ ಹಲ್ಲೆ ನಡೆಸಲು ಪೊಲೀಸರಿಗೆ ಅಧಿಕಾರ ಕೊಟ್ಟವರು ಯಾರು? ಇವರೇನು ಪೊಲೀಸರೊ ಅಥವಾ ಗೂಂಡಾಗಳೋ? ಹಲ್ಲೆ ನಡೆಸಿದ ಅಧಿಕಾರಿಯನ್ನು ಈ ಕೂಡಲೇ ಅಮಾನತು ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಭಾರತ್ ಜೋಡೋ ಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಚಾಮರಾಜನಗರದಿಂದ ಮೈಸೂರು ನಗರಕ್ಕೆ ಎಂಟ್ರಿ ಕೊಟ್ಟಿದೆ.

Home add -Advt

HDK ಬ್ಲ್ಯಾಕ್ ಮೇಲರ್, ಗೂಂಡಾ ಸಂಸ್ಕೃತಿಗೆ ಮುನ್ನುಡಿ ಬರೆದಿದ್ದಾರೆ ಎಂದ CPY; ಯೋಗೇಶ್ವರ್ ನಿಂದ ದುಡ್ದು ಹೊಡೆಯೋ ಪ್ಲಾನ್; ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

https://pragati.taskdun.com/politics/h-d-kumaraswamyc-p-yogeshwarattack/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button