Latest

ಬಿಲ್ ಪಾಸ್ ಮಾಡಲು ಕಮಿಷನ್ ಗೆ ಬೇಡಿಕೆ; ಮಹಿಳಾ PDO ಆಡಿಯೋ ವೈರಲ್

ಪ್ರಗತಿವಾಹಿನಿ ಸುದ್ದಿ; ರಾಮನಗರ: ಬಿಲ್ ಪಾಸ್ ಮಾಡಲು ಮಹಿಳಾ ಪಿಡಿಓ ಒಬ್ಬರು ಕಮಿಷನ್ ಗೆ ಬೆಡಿಕೆ ಇಟ್ಟ ಘಟನೆ ರಾಮನಗರ ಜಿಲೆ ಚನ್ನಪಟ್ಟಣ ತಾಲೂಕಿನಲ್ಲಿ ನಡೆದಿದೆ.

ಬಿ.ವಿ.ಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ಶೋಭಾ ನರೇಗಾ ಕಾಮಗಾರಿ ಬಿಲ್ ಪಾಸ್ ಮಾಡಲು 20% ಕಮಿಷನ್ ಕೇಳಿದ್ದಾರೆ. ಈ ಕುರಿತ ಆಡಿಯೋ ವೈರಲ್ ಆಗಿದೆ. ಕಾಮಗಾರಿ ನಡೆಸಿದ ವ್ಯಕ್ತಿ ಹಾಗೂ ಪಿಡಿಓ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಪಿಡಿಓ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಮಹಿಳಾ ಪಿಡಿಒ ಶೋಭಾ, ಅಧ್ಯಕ್ಷರಿಗೆ, ಇಂಜಿನಿಯರ್ ಗಳಿಗೆ, ಇಓ, ಡಿಎಸ್, ಕಚೇರಿ ಸಿಬ್ಬಂದಿಗಳಿಗೂ ಪರ್ಸಂಟೇಜ್ ಕೊಡಬೇಕು. ಹಾಗಾಗಿ 20% ಕಮಿಷನ್ ಕೊಡುವಂತೆ ಒತ್ತಾಯಿಸಿದ್ದಾರೆ.

ಪಿಡಿಓ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ತರು ಒತ್ತಾಯಿಸಿದ್ದಾರೆ.

Home add -Advt

ಮುರುಘಾಶ್ರೀಗಳ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ

https://pragati.taskdun.com/latest/murughashreejudicial-custodyextained/

Related Articles

Back to top button