Kannada NewsKarnataka NewsLatest

ಬಿಜೆಪಿ ದುಬಾರಿ ದರ್ಬಾರ್ ಟ್ವೀಟರ್ ನಲ್ಲಿ ಟ್ರೆಂಡಿಂಗ್ : ಲಕ್ಷ್ಮಿ ಹೆಬ್ಬಾಳಕರ್ ಸರಣಿ ಟ್ವೀಟ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಿಜೆಪಿ ದುಬಾರಿ ದರ್ಬಾರ್ ಟ್ವೀಟರ್ ನಲ್ಲಿ ಗುರುವಾರ ಭಾರಿ ಟ್ರೆಂಡಿಂಗ್ ಆಗಿದ್ದು, ಬೆಳಗಾವಿ ಗ್ರಾಮೀಣ ಶಾಸಕರೂ, ಕೆಪಿಸಿಸಿ ರಾಜ್ಯ ವಕ್ತಾರರೂ ಆಗಿರುವ ಲಕ್ಷ್ಮಿ ಹೆಬ್ಬಾಳಕರ್ ಸಹ ಸರಣಿ ಟ್ವೀಟ್ ಮಾಡಿದ್ದಾರೆ.

ಒಟ್ಟೂ 11 ಟ್ವೀಟ್  ಅವರ ಟ್ವೀಟ್ ಗಳು ಹೀಗಿವೆ –

  1. ಹತ್ತು ಲಕ್ಷ ರೂ. ಗಿಂತಲೂ ಹೆಚ್ಚು ವಾರ್ಷಿಕ ಆದಾಯವಿರುವ, ಸಮರ್ಥ ಕುಟುಂಬಗಳು ತಮ್ಮ ಗ್ಯಾಸ್ ಸಬ್ಸಿಡಿ ಬಿಟ್ಟು ಕೊಡಿ, ಅದರಿಂದ ಅಡುಗೆ ಅನಿಲ ಖರೀದಿಸಲಾಗದ ಕುಟುಂಬಕ್ಕೆ ಉಚಿತ ಸಂಪರ್ಕ ಕಲ್ಪಿಸಬಹುದು ಎಂದು ಪ್ರಧಾನಿಯವರು ಮನವಿ ಮಾಡಿದ್ದರು. ಈಗ ನಿಜಕ್ಕೂ ಎಷ್ಟು ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ಸಿಕ್ಕಿದೆ?
  2. ಗೃಹ ಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ಜನಸಾಮಾನ್ಯರು ತಮ್ಮ ಜೀವನ ನಡೆಸಲು ಮನೆಯಲ್ಲಿದ್ದ ಒಡವೆಗಳನ್ನು ಮಾರುವ ಸ್ಥಿತಿ ನಿರ್ಮಾಣವಾಗಿದೆ. ಅಚ್ಚೇದಿನ ಭರವಸೆ ನೀಡಿ, ಮನೆಯನ್ನೇ ಬರಿದಾಗಿಸುತ್ತಿದೆ ಬಿಜೆಪಿ ಸರ್ಕಾರ.
  3.  ಬಡತನ, ಆರ್ಥಿಕ ಸಂಕಷ್ಟದ ಕಾರಣಕ್ಕೆ 1 ವರ್ಷದಲ್ಲಿ ರಾಜ್ಯದಲ್ಲಿ 850 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಥ ಬಿಕ್ಕಟ್ಟಿನ ಸಮಯದಲ್ಲಿ ರಾಜ್ಯದ ಆರ್ಥಿಕತೆಗೆ ಚಾಲನೆ ನೀಡುವ ಕಾರ್ಯಕ್ರಮ ರೂಪಿಸಬೇಕಾದ @BJP4Karnataka ಸರ್ಕಾರ, ಜನರ ಮೇಲೆ ಬೆಲೆ ಏರಿಕೆಯ ಹೊರೆ ಹೊರಿಸಿದೆ. ಇದು ಅತ್ಯಂತ ನಿರ್ಲಜ್ಯ ಸರ್ಕಾರ.
  4.  ಗ್ಯಾಸ್ ಸಿಲಿಂಡರ್ ಖರೀದಿಯ ಬಳಿಕ ಬರುತ್ತಿದ್ದ ಸರ್ಕಾರದ ಸಬ್ಸಿಡಿ ಹಣ ಖಾತೆಗೆ ಬರುವುದು ನಿಂತು ಸುಮಾರು ಎರಡು ವರ್ಷಗಳೇ ಕಳೆದಿವೆ. ಯಾರಿಗೂ ಏನೂ ತಿಳಿಸದೆ ಸರ್ಕಾರ ಸಬ್ಸಿಡಿ ನಿಲ್ಲಿಸಿದ್ದು ಏಕೆ? ಹಾಗಾದರೆ ಉಜ್ವಲ ಯೋಜನೆಯ ಪ್ರಯೋಜನವೇನು @narendramodi ಅವರೇ.
  5.  ಪ್ರತಿ ಲೀಟರ್ ಪೆಟ್ರೋಲ್‌ನ ಮೂಲ ಬೆಲೆ 37 ರೂ. ಅದರ ಮೇಲೆ ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕ 32.90 ರೂ. ರಾಜ್ಯಗಳು ವಿಧಿಸುವ ತೆರಿಗೆ ಸುಮಾರು 28 ರೂ. ಸಾಗಣೆ, ಸಂಸ್ಕರಣೆ ಮತ್ತು ಡೀಲರ್ ಕಮಿಷನ್ 8 ರೂ. ಅಲ್ಲಿಗೆ ಪೆಟ್ರೋಲ್ ಬೆಲೆ 106ರೂ ದಾಟುತ್ತದೆ. ತೆರಿಗೆ ಹಣದ ಮೂಲಕ ಜನರ ಲೂಟಿಗಿಳಿದಿದ ಬಿಜೆಪಿ ಸರ್ಕಾರ.
  6.  ಅಡುಗೆ ಅನಿಲ ಬೆಲೆ 15 ರೂ. ಹೆಚ್ಚಳವಾಗಿದೆ. 14.2 ಕೆಜಿಯ ಸಿಲಿಂಡರ್ ಬೆಲೆ ಕರ್ನಾಟಕದಲ್ಲಿ 902.5 ರೂ ತಲುಪಿದೆ. ಕಳೆದ 2 ತಿಂಗಳಲ್ಲಿ ನಾಲ್ಕನೇ ಬಾರಿ ಗ್ಯಾಸ್ ಬೆಲೆ ಏರಿಕೆ ಮಾಡಿದೆ. ಉಜ್ವಲ ಯೋಜನೆ ಅಡಿಯಲ್ಲಿ ಬಡವರಿಗೆ ಉಚಿತ ಗ್ಯಾಸ್ ಕೊಡುವುದಾಗಿ ಭರವಸೆ ನೀಡಿ, ಜನರ ಉಜ್ವಲ ಭವಿಷ್ಯವನ್ನೇ ಹಾಳು ಮಾಡಿದ ಬಿಜೆಪಿ.
  7.  ಬಿಜೆಪಿ ಸರ್ಕಾರದ ಯೋಜಿತವಲ್ಲದ ಲಾಕ್‌ಡೌನ್‌ನಿಂದಾಗಿ ಜನರ ಬದುಕು ಬೀದಿಗೆ ಬಿದ್ದಿದೆ. ಲಕ್ಷಾಂತರ ಉದ್ಯಮಗಳು ಬಾಗಿಲುವ ಮುಚ್ಚಿವೆ. ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇಂಥ ಬಿಕ್ಕಟ್ಟಿನ ಸಮಯದಲ್ಲೂ ಸಾರ್ವಜನಿಕರ ಮೇಲೆ ಬೆಲೆ ಏರಿಕೆಯ ಹೊರೆಯನ್ನು ಹೊರಿಸಿದೆ.
  8.  ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರ್ ಮೇಲೆ 31 ಪೈಸೆ ಏರಿಕೆಯಾಗಿದ್ದು 106.83 ರೂಗೆ ತಲುಪಿದೆ. ಡೀಸೆಲ್ ಮೇಲೆ 37 ಪೈಸೆಯಷ್ಟು ಏರಿಕೆಯಾಗಿದ್ದು 97.40ರೂಗೆ ತಲುಪಿದೆ. ಕಳೆದ 10 ದಿನಗಳಲ್ಲಿ ಕರ್ನಾಟಕದಲ್ಲಿ 8 ಬಾರಿ ಬೆಲೆ ಏರಿಸಿದೆ. ಅಚ್ಚೇದಿನದ ಭರವಸೆ ನೀಡಿ, ಕೆಟ್ಟ ದಿನಗಳ ಅನುಭವ ಮಾಡಿಸುತ್ತಿದೆ.
  9.  ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದರು. ಉದ್ಯೋಗ ಕೊಡಿ ಎಂದು ಕೇಳಿದಾಗ, ಪಕೋಡ ಮಾಡಿ ಎಂದರು. ಈಗ ಅಡುಗೆ ತೈಲ, ಕಡಲೆ ಹಿಟ್ಟಿನ ಬೆಲೆಯನ್ನೂ ಹೆಚ್ಚಿಸಿದರು. ಯುವಜನ ವಿರೋಧಿ ಬಿಜೆಪಿ.
  10.  @BJP4India ಸರ್ಕಾರ ಪೆಟ್ರೋಲ್ ಮೇಲೆ 35 ರೂ. ಡೀಸೆಲ್ ಮೇಲೆ 65 ರೂ. ತೆರಿಗೆ ಹಾಕಿದೆ. ಅಬಕಾರಿ ಸುಂಕ ಹೆಚ್ಚಿಸಿ, ತೆರಿಗೆ ಹಣದ ಮೂಲಕ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದೆ ನರೇಂದ್ರ ಮೋದಿ ಸರ್ಕಾರ.
  11. ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ @BJP4India ಸರ್ಕಾರ. ₹106 ಪೆಟ್ರೋಲ್, ₹95 ಡೀಸೆಲ್, ₹900 ಗ್ಯಾಸ್, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ, ಜನರ ಕೈ ಬರಿದಾಗಿದೆ. ಜನ ವಿರೋಧಿ ಸರ್ಕಾರ.

ಮನೆ ಕುಸಿತಕ್ಕೆ 7 ಜನರ ಬಲಿ: ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ ಶಾಸಕಿ ಹೆಬ್ಬಾಳಕರ್

ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ನೋಡಿಕೊಂಡ ಶಾಸಕಿ; ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

Home add -Advt

Related Articles

Back to top button