Kannada NewsKarnataka NewsLatest

ರಿಯಲ್ ಎಸ್ಟೇಟ್ ಉದ್ಯಮಿ, ಕ್ರೆಡೈ ನಿಯೋಜಿತ ಅಧ್ಯಕ್ಷ ವಿಜಯ ಭಂಡಾರಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿ, ಕ್ರೆಡೈ ಬೆಳಗಾವಿ ನಿಯೋಜಿತ ಅಧ್ಯಕ್ಷ ವಿಜಯ ಭಂಡಾರಿ ನಿಧನರಾಗಿದ್ದಾರೆ. ಅವರಿಗೆ ಸುಮಾರು 48 ವರ್ಷ ವಯಸ್ಸಾಗಿತ್ತು.

ಬೆಳಗಾವಿಯ ಪ್ರಸಿದ್ಧ ಜವಳಿ ಉದ್ಯಮಿ ಕಮಲ ಕಿಶೋರ ಭಂಡಾರಿ ಅವರ ಪುತ್ರರಾಗಿದ್ದ ವಿಜಯ ಭಂಡಾರಿ ಅಲ್ಪಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಪುಣೆಗೆ ತೆರಳಿದ್ದ ವೇಳೆ ಅಲ್ಲಿಯೇ ನಿಧನರಾದರೆಂದು ಗೊತ್ತಾಗಿದೆ.

ಅವರಿಗೆ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಪುಣೆಯಿಂದ ಅವರ ಮೃತದೇಹವನ್ನು ಬೆಳಗಾವಿಗೆ ತರಲಾಗುತ್ತಿದ್ದು, ಸಂಜೆ 5 ಗಂಟೆಗೆ ಖಾಸಬಾಗದ ಜೋಶಿ ಮಾಳದಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಲಿವೆ.

Home add -Advt

ಕ್ರೆಡೈ ರಾಜ್ಯಾಧ್ಯಕ್ಷ ಚೈತನ್ಯ ಕುಲಕರ್ಣಿ ಅವರು ವಿಜಯ ಭಂಡಾರಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 

https://pragati.taskdun.com/latest/heavyrain-flood-rongroad-it-banking-firms-immense-loss/

https://pragati.taskdun.com/belgaum-news/double-dhamaka-for-belgaum-2-awards-from-credai/

Related Articles

Back to top button