ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ನಗರದಲ್ಲಿ ಸಿಸಿಬಿ ಪೊಲೀಸರು ದಾಳಿ ಮಾಡಿ ಪೆನ್ನಿ (ಹೆರಾಯಿನ್) ಮಾರಾಟ ಮಾಡುತ್ತಿದ್ದ ಒಟ್ಟು 3 ಜನರನ್ನು ಬಂಧಿಸಿದ್ದಾರೆ.
ದಿನಾಂಕ: ೨೩/೦೫/೨೦೨೨ ರಂದು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ನಿಂಗನಗೌಡ ಪಾಟೀಲ ನೇತೃತ್ವದ ತಂಡ ದಾಳಿ ಮಾಡಿ ಪೆನ್ನಿ (ಹೆರಾಯಿನ್ @ ಬೀಟ್ ) ಮಾರಾಟ ಮಾಡುತ್ತಿದ್ದ,
೧) ತನ್ವೀರ್ ಮೆಹಬೂಬ ದೇಶನೂರ, (೪೦), ಸಾ: ರವಿವಾರ ಪೇಟೆ, ಬೆಳಗಾವಿ,
೨) ಸದ್ದಾಮ್ ಅಕ್ಬರ್ ದೇಶನೂರ, (೩೧) ಸಾ: ಗಾಂಧಿ ನಗರ, ಬೆಳಗಾವಿ
೩) ಮಯೂರ ಹರಿಭಾವು ಭಾತಖಾಂಡೆ, (೨೭) ಸಾ: ಸರಸ್ವತಿ ನಗರ, ಗಣೇಶಪುರ, ಬೆಳಗಾವಿ
ಇವರನ್ನು ಬಂಧಿಸಿ, ಇವರಿಂದ ೨೭ ಗ್ರಾಂ ತೂಕದ ಪೆನ್ನಿ (ಹೆರಾಯಿನ್) ಚೀಟಿಗಳು-೮೫, ಅಂದಾಜು ಬೆಲೆ ರೂ. ೩೪,೦೦೦/- ಮತ್ತು ೦೩ ಮೊಬೈಲ್ ಫೋನ್ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಡೇಬಜಾರ ಠಾಣೆ-
ಖಡೇಬಜಾರ ಠಾಣೆ ಪೊಲೀಸರು ಸಹ ದಾಳಿ ಮಾಡಿ ಪೆನ್ನಿ @ಬೀಟ್ ಮಾರುತ್ತಿದ್ದ ಓರ್ವನನ್ನು ಬಂಧಿಸಿದ್ದಾರೆ.
ದಿನಾಂಕ: ೨೩/೦೫/೨೦೨೨ ರಂದು ಖಡೇಬಜಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಡಿ. ಪಿ. ನಿಂಬಾಳ್ಕರ್ ನೇತೃತ್ವದ ತಂಡ ದಾಳಿ ಮಾಡಿ ಪೆನ್ನಿ @ ಬೀಟ್ ಮಾರಾಟ ಮಾಡುತ್ತಿದ್ದ, ರಿತೇಶ ಪರಿಶರಾಮ ಗುಂಡಕಲ್ಲ (೨೭) ಸಾ|| ಚವ್ಹಾಟ ಗಲ್ಲಿ ಬೆಳಗಾವಿ ಇವನನ್ನು ಬಂಧಿಸಿ, ಅವನಿಂದ ೮ ಗ್ರಾಂ ೫೦೦ ಮಿಲಿ ಪೆನ್ನಿ @ ಬೀಟ್ ಮಾದಕ ವಸ್ತು ಅಂದಾಜು ಬೆಲೆ ರೂ.೧೨,೯೫೦/- ಹಣ ರೂ. ೬೦೦/- & ಒಂದು ಮೋಬೈಲ್ ಫೋನ್ ವಶಪಡಿಸಿಕೊಂಡು ಆತನ ವಿರುದ್ಧ ಖಡೇಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗೋಕಾಕ ನಗರದಲ್ಲಿ ಹೆರಾಯಿನ್ ವಶ ; ಬೆಳಗಾವಿಯ ಮೂವರು ಸೇರಿ ನಾಲ್ವರ ಆರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ