Belagavi NewsBelgaum NewsKannada NewsKarnataka NewsLatest

*ಔಟ್ ಗೋಯಿಂಗ್ ಹಾಗೂ‌ ಇನ್ ಕಮೀಂಗ್ ಪಾಲಿಟಿಕ್ಸ್ ನಲ್ಲಿ ಜನ ಹೈರಾಣು: ಛಲವಾದಿ‌ ನಾರಾಯಣಸ್ವಾಮಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಔಟ್ ಗೋಯಿಂಗ್ ಹಾಗೂ‌ ಇನ್ ಕಮೀಂಗ್ ಪಾಲಿಟಿಕ್ಸ್ ಮಧ್ಯದಲ್ಲಿ ಜನರ ಮಾರಣಹೋಮವಾಗಿದೆ.  ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿ ಲೂಟಿ ಆಗುತ್ತಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ‌ ನಾರಾಯಣಸ್ವಾಮಿ ಹೇಳಿದರು. 

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ‌ ಲೂಟಿ ಸರ್ಕಾರವಾಗಿದೆ. 5000 ಕೋಟಿ ಹಣ  ಎಲ್ಲಿ‌ ಹೋಯ್ತು. ಜಮೀನು‌ ಕದಿಯೋ‌‌ ಕೆಲಸವಾಗುತ್ತಿದೆ. ಇನ್ನೂ  ಬಹಳ‌ ಜನರದ್ದು‌ ಹೊರ ಬರಲಿದೆ. 

ಇಂದು‌ ಅಧಿವೇಶನದ ಕೊನೆಯ‌ ದಿನ.ಇನ್ನೊಂದು ವಾರ ಅಧಿವೇಶನ ನಡೆಸಬೇಕೆಂದು‌ ಒತ್ತಾಯ ಮಾಡಿದ್ದೇವೆ. ಆದರೆ ಸಿಎಂ ಮನಸ್ಸು ಮಾಡಲಿಲ್ಲ. ಕಲ್ಯಾಣ ಕರ್ನಾಟಕ ಭಾಗದ‌ ವಿಚಾರಗಳ ಕುರಿತು ಬೇಜವಾಬ್ದಾರಿ ತೋರಿದಂತಾಯ್ತು. ರೈತರ ಸಮಸ್ಯೆ‌ ಇತರೆ ಸಮಸ್ಯೆ‌ ಬಗೆ‌ ಹರಿಸಿಲ್ಲ. ಬರಿಗೈಯ್ಯಲ್ಲಿ ಬಂದು ಹೋದಂತಾಗಿದೆ. ಜನರು ಅರ್ಥಮಾಡಿಕೊಳ್ಳಬೇಕಿದೆ ಎಂದು‌ ಹೇಳಿದರು.

Home add -Advt

Related Articles

Back to top button