*ಮಹಾದಾಯಿ ವಿಚಾರದಲ್ಲಿ ಬಿಜೆಪಿಯ ವಿಫಲತೆಯನ್ನು ಜನರಿಗೆ ತಿಳಿಸಬೇಕು: ಸಂತೋಷ ಲಾಡ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾದಾಯಿ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಮಹಾದಾಯಿ ಹೋರಾಟಗಾರರು ಯೋಜನೆ ಜಾರಿಗೆ ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಜೊತೆಗೆ ಕೆಲ ಪರಿಸರವಾದಿಗಳು ಯೋಜನೆ ಜಾರಿ ವಿರೊಧಿಸುತ್ತಿದ್ದು, ಈ ಬಗ್ಗೆ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವಿದ್ದಾಗ ಮಹಾದಾಯಿಗೆ ಅನುಮತಿ ನೀಡುವ ಪ್ರಯತ್ನವನ್ನು ಬಿಜೆಪಿ ಸಂಸದರು ಮಾಡಿಲ್ಲ. ಬಿಜೆಪಿಯ ವಿಫಲತೆಯನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮಾಧ್ಯಮಗಳು ಮಾಡಬೇಕೆಂದು ಎಂದರು
40-45 ವರ್ಷದಿಂದ ಕಾಂಗ್ರೆಸನಲ್ಲಿ ಸಕ್ರಿಯವಾಗಿದ್ದರೂ, ಸಿಎಂ ಆಗುವ ಅವಕಾಶ ಸಿಗಲಿಲ್ಲವೆಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಇದು ಅವರ ಸಕಾರಾತ್ಮಕ ಹೇಳಿಕೆಯಾಗಿದೆ. ಸಿಎಂ ಸ್ಥಾನವಾಗಲಿ, ಉನ್ನತ ಸ್ಥಾನವಾಗಲಿ ಸಿಗದಿದ್ದರೂ ಎಐಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿತೆಂದು ಅವರು ಹೇಳಿರಬಹುದು. ಬುದ್ಧ ಬಸವ ಅಂಬೇಡ್ಕರರ ತತ್ವಗಳಡಿ ನಡೆಯುವ ಖರ್ಗೆ ಅವರು ಓರ್ವ ಸಮರ್ಥ ರಾಜಕಾರಣಿಯಾಗಿದ್ದು, ದೇಶದ ಯಾವುದೇ ಉನ್ನತ ಹುದ್ದೆಗೆ ಯೋಗ್ಯರಾಗಿದ್ದಾರೆ ಎಂದರು.
ಇನ್ನು ಮಹಾದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ನಮಗಿಂತ ಹೆಚ್ಚಿನ ಮಾಹಿತಿ ನಿಮಗೆ ಇದ್ದು, ಈ ಬಗ್ಗೆ ಬಿಜೆಪಿಯವರಿಂದಲೇ ಉತ್ತರ ಪಡೆಯಬೇಕು. ಸಾರ್ವಜನಿಕರಲ್ಲಿ ಕೇಂದ್ರ ಸರ್ಕಾರದ ವಿಫಲತೆಯನ್ನು ತಿಳಿಸಿಕೊಡುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಟೆಂಡರ್ ಕರೆದು ಸಿಎಂ ಕಾಮಗಾರಿ ಆರಂಭಿಸಲು ಸಿದ್ದವಾಗಿದ್ದಾರೆ. ಮಹಾದಾಯಿ ಕಾಮಗಾರಿ ಆರಂಭಗೊಂಡಿದೆ ಎಂದು ಬಿಜೆಪಿಯವರು ಸಿಹಿ ಹಂಚಿದ್ದರು.
ಈಗ ಅವರು ಹಾರಿಕೆ ಉತ್ತರ ಕೊಟ್ಟರೇ ನಡೆಯುತ್ತಾ ಎಂದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇರುವಾಗ ತುಟಿ ಪಿಟಕ್ ಅನ್ನುತ್ತಿಲ್ಲ. ಯಾವುದೇ ಕೇಳಿದರೇ, ಮೋದಿ ವಿರುದ್ಧ ಮಾತನಾಡಿದ್ದೇವೆ ಎನ್ನುತ್ತಾರೆ.
ಇಡೀ ದೇಶವನ್ನ 11 ವರ್ಷದಿಂದ ಮೂಕರನ್ನಾಗಿಸುತ್ತಿದ್ದಾರೆ. ಕೆಲ ಪ್ರಾದೇಶಿಕ ಸುದ್ದಿ ವಾಹಿನಿಗಳು ಕೂಡ ಬಿಜೆಪಿ ವಕ್ತಾರರಂತೆ ಮಾತನಾಡುತ್ತಾರೆ. ಸಂಸತ್ ಸದನದಿಂದ ಸಿಎಂ ಹೊರ ದೇಶಕ್ಕೆ ಹೋಗುವ ಅವಶ್ಯಕೆ ಏನಿದೆ? ಮೋದಿ ಸಾಹೇಬರಿಗೆ ಏನು ಪ್ರಶ್ನೆ ಮಾಡಬಾರದು. ನಿಮ್ಮದು ಪಿಕ್ಚರ್ ನಮ್ಮಂತೆಯೇ ಇದೆ ಎಂದರು.