ಜನರ ಪ್ರೀತಿ, ವಿಶ್ವಾಸ, ನಂಬಿಕೆ ಮತ್ತು ಆಶಿರ್ವಾದವೇ ಜೊಲ್ಲೆ ಗ್ರುಪ್ ಬೆಳವಣಿಗೆಗೆ ಕಾರಣ – ಸಂಸದ ಅಣ್ಣಾಸಾಹೇಬ ಜೊಲ್ಲೆ


ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಕೋವಿಡ್ ಮತ್ತು ಪ್ರವಾಹ ಸಂಕಷ್ಟದ ಸಮಯದಲ್ಲಿಯೂ ಲೋಕಸಭೆ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ಮುಟ್ಟುವ ಹಾಗೇ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಜನರ ಪ್ರೀತಿ, ವಿಶ್ವಾಸ, ನಂಬಿಕೆ ಮತ್ತು ಆಶಿರ್ವಾದವೇ ಜೊಲ್ಲೆ ಗ್ರುಪ್ ಬೆಳವಣಿಗೆ ಕಾಣಲು ಸಾಧ್ಯವಾಗಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಸಂತಸ ವ್ಯಕ್ತಪಡಿಸಿದರು.
ಇಲ್ಲಿನ ಆರ್.ಡಿ.ಕಾಲೇಜಿನ ಮೈದಾನದಲ್ಲಿ ೬೧ ನೆಯ ಜನ್ಮದಿನದ ನಿಮಿತ್ಯ ಹುಟ್ಟು ಹಬ್ಬ ಆಚರಣೆ ಸಮಿತಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಕೈ ಬಲಪಡಿಸಲು ನನ್ನನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳಿಸಿರುವ ನೆನಪು ಮರೆಯುವಂತಿಲ್ಲ, ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಕೊರೊನಾ ಮತ್ತು ಪ್ರವಾಹ ಬಂದಿರುವ ಕಾರಣದಿಂದ ಕೆಲವು ಹಳ್ಳಿಗಳಿಗೆ ಭೇಟಿ ಕೊಡಲು ಸಾಧ್ಯವಾಗಿಲ್ಲ, ಆದರೂ ಶೇ ೯೦ ರಷ್ಟ್ರು ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಪರಿಹರಿಸಲು ಕೆಲಸ ಮಾಡಿದ್ದೇನೆ ಎಂದರು.
ಮೊದಲ ಬಾರಿಗೆ ನಡೆದ ಟ್ಯಾಲೆಂಟ್ ಸ್ಪರ್ಧೆಯಲ್ಲಿ ನಿರೀಕ್ಷೆ ಮೀರಿ ಯಶಸ್ಸು ಸಿಕ್ಕಿದೆ. ಮುಂದಿನ ಬಾರಿ ಇನ್ನಷ್ಟು ಹೆಚ್ಚಾಗಿ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಗ್ರಾಮೀಣ ಕ್ರೀಡೆಗೆ ಒತ್ತು ಕೊಡಲು ಕಬ್ಬಡ್ಡಿ, ಕುಸ್ತಿ, ಕ್ಷೇತ್ರದ ಎರಡು ಕಡೆಗಳಲ್ಲಿ ಸಿಂಹ ಘರ್ಜನೆ ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಶೀಘ್ರದಲ್ಲಿ ಗೋಟೂರ-ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಲಿದೆ. ಚಿಕ್ಕೋಡಿಗೆ ಬೈಪಾಸ ಕಾಮಗಾರಿಗೆ ಟೆಂಡರ ಕರೆಯಲಾಗುತ್ತದೆ ಎಂದರು.
ಹುಟ್ಟು ಆಚರಣಾ ಸಮಿತಿ ಅಧ್ಯಕ್ಷ ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಜೊಲ್ಲೆ ದಂಪತಿಗಳು ಸಮಾಜಮುಖಿ ಕೆಲಸ ಮಾಡುವುದರಿಂದ ರಾಜಕೀಯದಲ್ಲಿ ವಿಶೇಷ ಸಾಧನೆ ಮಾಡುತ್ತಾ ಬಂದಿದ್ದಾರೆ. ಜನರ ಮೇಲಿರುವ ಅವರ ಪ್ರೀತಿ ವಿಶ್ವಾಸವೇ ಅವರಿಗೆ ದೊಡ್ಡ ಶಕ್ತಿಯಾಗಿದೆ ಎಂದರು.
ಮಾಜಿ ಶಾಸಕ ಪಿ.ರಾಜೀವ ಮಾತನಾಡಿ, ಜಿರೋದಿಂದ ಹೀರೋ ಆದವರಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಒಬ್ಬರಾಗಿದ್ದಾರೆ. ಅವರ ಆದರ್ಶ ನಮಗೆ ಮತ್ತು ಯುವಕರಿಗೆ ದಾರಿ ದೀಪವಾಗಿದೆ ಎಂದರು.
ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಜೊಲ್ಲೆ ಪರಿವಾರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆಯಲು ಜನರ ಇಚ್ಚಾಶಕ್ತಿಯ ಆಶಿರ್ವಾದವೆ ಕಾರಣವಾಗಿದೆ. ನಮ್ಮ ಮನೆತನದಿಂದ ನಿರಂತರವಾಗಿ ಸಮಾಜಮುಖಿ ಕೆಲಸ ನಡೆಯುತ್ತವೆ ಎಂದರು.
ವೇದಿಕೆ ಮೇಲೆ ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ, ಚರಮೂರ್ತಿಮಠದ ಸಂಪಾದನ ಸ್ವಾಮೀಜಿ, ಜಾರಕಿಹೊಳಿಯ ಕೃಪಾನಂದ ಸ್ವಾಮೀಜಿ, ಗೋಪಾಲ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಪ್ರಾಣಲಿಂಗ ಸ್ವಾಮೀಜಿ, ಡಾ, ಶ್ರದ್ಧಾನಂದ ಸ್ವಾಮೀಜಿ, ವಿಶೇಷ ಓಲಂಪಿಕ್ಸ್‌ನ ಸತೀಶ ಪಿಳ್ಳೆ, ಅಮರೇಂದ್ರ, ಎಂ.ಪಿ.ಪಾಟೀಲ, ಪವನ ಪಾಟೀಲ, ದುಂಡಪ್ಪ ಬೆಂಡವಾಡೆ, ಅಶೋಕ ಹರಗಾಪೂರೆ, ಸಂಜು ಅರಗೆ, ಮಹೇಶ ಭಾತೆ, ಸತೀಶ ನೂಲಿ, ನ್ಯಾಯವಾದಿ ನಾಗೇಶ ಕಿವಡ, ರಾಜು ಖೋತ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ ಮುಂತಾದವರು ಇದ್ದರು.
ಇದಕ್ಕೂ ಮೊದಲು ವಿಶೇಷ ಓಲಂಪಿಕ್ಸ್ ಕ್ರೀಡೆಯಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿದ ಕ್ರೀಡಾಪಟುಗಳನ್ನು ಮತ್ತು ಟ್ಯಾಲೆಂಟ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಿ ಗಣ್ಯರು ಸನ್ಮಾನಿಸಿ ಗೌರವಿಸಿದರು.
ಮ್ಯಾಗನಮ್ ಟಫ್ ವ್ಯವಸ್ಥಾಪಕ ನಿರ್ದೇಶಕ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ