Kannada NewsKarnataka NewsLatest

ಯುವತಿಯರು ಸ್ನಾನ ಮಾಡುವಾಗ ಕದ್ದು ವಿಡಿಯೊ ಮಾಡುತ್ತಿದ್ದ ವಿಕೃತ ಯುವಕ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮಹಿಳಾ ಪಿಜಿಯೊಂದರ ಸ್ನಾನಗೃಹದಲ್ಲಿ ಯುವತಿಯರು ಸ್ನಾನ ಮಾಡುವಾಗ ಕಿಟಕಿಯಲ್ಲಿ ಮೊಬೈಲ್‌ ಇರಿಸಿ ಕದ್ದು ವಿಡಿಯೋ ಮಾಡುತ್ತಿದ್ದ ಯುವಕನನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ನಿವಾಸಿ ಅಶೋಕ್‌ (25) ಬಂಧಿತ. ಈತ ಅಶೋಕನಗರದ ಖಾಸಗಿ ಬ್ಯಾಂಕ್‌ ಒಂದರ ಕ್ರೆಡಿಟ್‌ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. 

ಸ್ವತಃ ತಾನು ಹೂಡಿಯ ತಿಗಳರಪಾಳ್ಯದ ಪುರುಷರ ಪಿಜಿಯೊಂದರಲ್ಲಿ ಉಳಿದುಕೊಂಡಿದ್ದ. ಇದರ ಪಕ್ಕದಲ್ಲಿರುವ ಮಹಿಳಾ ಪಿಜಿಯ ಸ್ನಾನಗೃಹದಲ್ಲಿ ಯುವತಿಯರು ಸ್ನಾನ ಮಾಡುವಾಗ ಕಿಟಕಿಯಲ್ಲಿ ಮೊಬೈಲ್ ಇಟ್ಟು ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ. ಜೂ.21ರಂದು ಯುವತಿಯೊಬ್ಬಳು ಸ್ನಾನ ಮಾಡುವಾಗ ಕಿಟಕಿಯಲ್ಲಿ ಮೊಬೈಲ್‌ ಇಟ್ಟು ಚಿಡಿಯೊ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿ ಕೂಗಿಕೊಂಡಿದ್ದಾಳೆ.

ಪಿಜಿಯಲ್ಲಿರುವ ಮಹಿಳೆಯರು ಕೂಡಲೆ ಆಗಮಿಸಿ ಆರೋಪಿಯನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನ ಮೊಬೈಲ್ ಗಳಲ್ಲಿ ಇಂಥ ವಿಡಿಯೊಗಳಿವೆ ಎನ್ನಲಾಗಿದ್ದು ತನಿಖೆ ಮುಂದುವರಿದಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button