ಪ್ರಗತಿವಾಹಿನಿ ಸುದ್ದಿ, ನವದೆಹಲಿ – ದೇಶದಲ್ಲಿ ಪೆಟ್ರೋಲ್, ಡಿಸೆಲ್ ಬೆಲೆ ಒಂದೇ ಬಾರಿಗೆ 18 -22 ರೂಗಳಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಕೇಂದ್ರ ಸರಕಾರ ತೆರಿಗೆ ಹಣದಲ್ಲಿ ಕಡಿತ ಮಾಡಿದಿದ್ದಲ್ಲಿ ಗ್ರಾಹಕರಿಗೆ ದೊಡ್ಡ ಶಾಕ್ ತಗುಲಲಿದೆ.
ಜೊತೆಗೆ, ಇಂಧನ ಬೆಲೆ ಏರಿಕೆ ಪರಿಣಾಮವಾಗಿ ಗ್ರಾಹಕರ ವಸ್ತುಗಳು, ಸಾರಿಗೆ ದರ ಎಲ್ಲವೂ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿ, ಬಡ, ಮಧ್ಯಮ ವರ್ಗದವರ ಪರಿಸ್ಥಿತಿ ಅಲ್ಲೋಲಕಲ್ಲೋಲವಾಗುವ ಸಾಧ್ಯತೆ ಇದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂದನ ಬೆಲೆ ಏರಿಕೆ ಅನಿವಾರ್ಯವಾಗಿದೆ. ರಷ್ಯಾ – ಉಕ್ರೇನ್ ಯುದ್ಧ ನಿಂತಲ್ಲಿ ಬೆಲೆ ನಿಯಂತ್ರಣಕ್ಕೆ ಬರಬಹುದು. ಸಧ್ಯದ ಮಟ್ಟಿಗಂತೂ ಬೆಲೆ ಏರಿಕೆ ಖಚಿತ ಎನ್ನಲಾಗುತ್ತಿದೆ.
ಬೆಲೆ ಏರಿಕೆ ಪರಿಣಾಮ ಎಲ್ಲ ವಸ್ತು, ಕ್ಷೇತ್ರಗಳ ಮೇಲೂ ಆಗುವ ಸಾಧ್ಯತೆ ಇದೆ. ಹಾಗಾಗಿ ಮುಂದಿನ ವಾರ ಇದರ ಪರಿಣಾಮ ಕಾಣಲಿದೆ.
ಭಾರತವನ್ನು ಹೊಗಳಿ ಪಾಕಿಸ್ತಾನವನ್ನು ಉಗಿದು ಉಪ್ಪಿನಕಾಯಿ ಹಾಕಿದ ಅಪಘಾನಿಸ್ತಾನ್; ಪಾಕ್ ಮಾಡಿದ ಲಫಂಗತನವೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ