Kannada NewsKarnataka NewsLatest

ಟ್ಯಾಂಕರ್ ಪಲ್ಟಿ : ರಸ್ತೆ ತುಂಬೆಲ್ಲ ಚಲ್ಲಿದ ಪೆಟ್ರೋಲ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬೆಳಗಾವಿಯಿಂದ ಹಳಿಯಾಳ ಕಡೆ ಸಂಚರಿಸುತ್ತಿದ್ದ ಟ್ಯಾಂಕರ್ ನಂದಗಡ-ಬೀಡಿ ರಸ್ತೆ ಮಧ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಸಾವಿರಾರು ಲಿಟರ್ ಗಳ ಡಿಸೆಲ್ ಮತ್ತು ಪೆಟ್ರೋಲ್ ರಸ್ತೆಯ ಮೇಲೆ ಹರಿದಾಡುತ್ತಿರುವ  ದೃಶ್ಯಾವಳಿ ವೈರಲ್ ಆಗಿದೆ. ರಸ್ತೆಯ ಮೇಲೆ ಸಂಚರಿಸುವವರು, ಅಕ್ಕ-ಪಕ್ಕದವರು ಸೋರುತ್ತಿರುವ ಪೆಟ್ರೋಲ್ ಮತ್ತು ಡಿಜೇಲ್ ಕ್ಯಾನ್ ಗಳಲ್ಲಿ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಟ್ಯಾಂಕರ್ ರಜಿಸ್ಟರ್ ನಂಬರ್ ಕೆ.ಎ.೨೫.ಸಿ ೪೬೪೧ ಇದ್ದು, ರಸ್ತೆಯ ಮೇಲಿನ ತಗ್ಗು-ದಿಬ್ಬಗಳನ್ನು ತಪ್ಪಿಸಲು ಹೋಗಿ  ಪಲ್ಟಿ ಆಗಿದೆ ಎಂದು ತಿಳಿದು ಬಂದಿದೆ. ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ನಂದಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲಿಸರು  ಘಟನಾಸ್ಥಳಕ್ಕೆ ಧಾವಿಸಿ ರಸ್ತೆ ಸಂಚಾರ ಸುಗಮಗೊಳಿಸಿದ್ದಾರೆ.
https://www.youtube.com/watch?v=Ee4qM_daI5s

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button