ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದಾರೂ ಕೂಡ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಮತ್ತು ರೋಡ್ ಸೆಸ್ ಹೆಚ್ಚಳ ಮಾಡಿ ಗ್ರಾಹಕರಿಗೆ ಶಾಕ್ ನೀಡಿದೆ.
ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲಿನ ವಿಶೇಷ ಅಬಕಾರಿ ಸುಂಕವನ್ನು 2 ರೂ. ಏರಿಕೆ ಮಾಡಿದ್ದರೆ, ರಸ್ತೆ ಸೆಸ್ ಅನ್ನು 1 ರೂ. ಏರಿಸಲಾಗಿದೆ. ವಿಶೇಷ ಅಬಕಾರಿ ಸುಂಕ(ಎಸ್‍ಇಡಿ) ಅಡಿ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದೆ.
ಕಚ್ಚಾತೈಲ ಬೆಲೆ ಕಳೆದ ಮೂರು ತಿಂಗಳಲ್ಲಿ ಸತತ ಇಳಿಕೆಯಾಗಿದೆ. ಆದಾಗ್ಯೂ ಕೇಂದ್ರ ಸರ್ಕಾರ ದಿಢೀರನೆ 3 ರೂ ಅಬಕಾರಿ ಸುಂಕ ಏರಿಕೆ ಮಾಡಿದೆ. ಅಲ್ಲದೆ, 2014-15ರ ಕಾಯ್ದೆಯನ್ನು ಪುನರಾರಂಭಿಸುವ ಮೂಲಕ 39.000 ಕೋಟಿ ಹೆಚ್ಚವರಿ ಆದಾಯವನ್ನು ಗಳಿಸಲು ಮುಂದಾಗಿದೆ.
ಇಲ್ಲಿಯವರೆಗೆ ಒಂದು ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ ಅಬಕಾರಿ ಸುಂಕ, ರಸ್ತೆ ಸೆಸ್ ಸೇರಿ 19.98 ರೂ. ವಿಧಿಸುತಿದ್ದರೆ ಈಗ ಇದು 22.98 ರೂ.ಗೆ ಏರಿಕೆಯಾಗಿದೆ. ಒಂದು ಲೀಟರ್ ಡೀಸೆಲಿಗೆ 15.83 ರೂ. ಅಬಕಾರಿ ಸುಂಕ ಇದ್ದರೆ ಈಗ ಇದು 18.83 ರೂ.ಗೆ ಏರಿಕೆಯಾಗಿದೆ.
ಇನ್ನು ರಾಜ್ಯ ಬಜೆಟ್ನಲ್ಲೂ ಹಣ ಸಂಗ್ರಹಕ್ಕಾಗಿ ಕಚ್ಚಾತೈಲದ ಮೇಲಿನ ರಾಜ್ಯ ತೆರಿಗೆಯನ್ನು 2. ರೂ ಏರಿಕೆ ಮಾಡಿರುವ ಪರಿಣಾಮ ಕರ್ನಾಕದಲ್ಲಿ ತೈಲದ ಬೆಲೆ ಮತ್ತಷ್ಟು ಏರಿಕೆಯಾಗಲಿದೆ. ಪ್ರಸ್ತುತ ರಾಜ್ಯದಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 72.19 ರೂ ಹಾಗೂ ಡೀಸೆಲ್ ಪ್ರತಿ ಲೀಟರ್ಗೆ 65.02 ರೂ. ಗೆ ಮಾರಾಟ ಮಾಡಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ