Latest

ಗಗನಮುಖಿಯಾದ ಪೆಟ್ರೋಲ್, ಡೀಸೆಲ್ ದರ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಭಾರೀ ಏರಿಕೆಯಾಗಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಏರಿಕೆಗೆ ಕಾರಣ ಎನ್ನಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್-ಡೀಸೆಲ್ ದರ ಲೀಟರ್ ಗೆ 25 ಪೈಸೆ ಹೆಚ್ಚಳವಾಗಿದ್ದು, ಪೆಟ್ರೋಲ್ 85.70 ರೂಪಾಯಿ ಆಗಿದೆ. ಡೀಸೆಲ್ ದರ 75.88 ರೂಪಾಯಿ ತಲುಪಿದೆ.

ಮಧ್ಯಪ್ರದೇಶ ಭೋಪಾಲ್ ನಲ್ಲಿ ಪೆಟ್ರೋಲ್-ಡೀಸೆಲ್ ದರ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಪೆಟ್ರೋಲ್ ಲೀಟರ್ ಗೆ 93.59 ಹಾಗೂ ಡೀಸೆಲ್ ಲೀಟರ್ ಗೆ 83.85 ರೂ ತಲುಪಿದೆ.

ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 88.59 ರೂ, ಹೈದರಾಬಾದ್ ನಲ್ಲಿ 89.15 ರೂ. ತಿರುವನಂತಪುರಂನಲ್ಲಿ 87.73 ರೂ. ಆಗಿದೆ. ಡೀಸೆಲ್ ಬೆಲೆಯಲ್ಲೂ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ 80.47 ರೂ, ಹೈದರಾಬಾದ್​ನಲ್ಲಿ 82.80 ರೂ. ಮುಂಬೈನಲ್ಲಿ 82.66 ರೂಗೆ ಏರಿಕೆಯಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button