ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ತೈಲ ಬೆಲೆ ಗಗನಮುಖಿಯಾಗುತ್ತಿದ್ದು, ಪೆಟ್ರೋಲ್ ದರ ರಾಜಸ್ಥಾನದಲ್ಲಿ 100 ರೂ ಆಗಿದ್ದು, ಡೀಸೆಲ್ ದರ 92.13 ರೂ ಆಗಿದೆ.
ಪೆಟ್ರೋಲ್ ಮೂಲ ದರಕ್ಕಿಂತ ತೆರಿಗೆಯೇ ಅತ್ಯಧಿಕವಾಗಿದೆ. 30 ರೂ ಪೆಟ್ರೋಲ್ ಗೆ 70 ರೂ ಟ್ಯಾಕ್ಸ್ ಹಾಕಲಾಗುತ್ತಿದೆ. ಪೆಟ್ರೋಲ್ ಲೀಟರ್ ಗೆ ಮೂಲ ದರ 31ರೂಪಾಯಿ ಇದ್ದು, ಕೇಂದ್ರದ ತೆರಿಗೆ 32 ರೂಪಾಯಿ, ರಾಜ್ಯದ ತೆರಿಗೆ 25 ರೂಪಾಯಿ ಹಾಗೂ ಡೀಲರ್ ಶುಲ್ಕ ಮತ್ತು ಸೆಸ್ 4 ರೂಪಾಯಿ ಆಗಿದೆ.
ಅಂತರಾಷ್ಟ್ರೀಯ ಕಚ್ಚಾ ತೈಲ ದರ ಪ್ರತಿ ಬ್ಯಾರಲ್ ಗೆ 64 ಡಾಲರ್ ಗೆ ಏರಿಕೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೂಲ ದರಕ್ಕಿಂತ ದುಪ್ಪಟ್ಟು ತೆರಿಗೆಯನ್ನು ವಿಧಿಸಿದೆ.
ದೆಹಲಿಯಲ್ಲಿ ಇಂದು ಪೆಟ್ರೋಲ್ 34 ಪೈಸೆ ಹೆಚ್ಚಲವಾಗಿದ್ದು, ಪ್ರತಿ ಲೀಟರ್ ಗೆ 89.88 ರೂ ಹಾಗೂ ಡೀಸೆಲ್ ಗೆ 32 ಪೈಸೆ ಏರಿಕೆಯಾಗಿದೆ. ಡೀಸೆಲ್ ದರ 80.27 ರೂ ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 92.54 ರೂ ಹಾಗೂ ಡೀಸೆಲ್ ದರ 85.07ರೂ ಆಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ