Latest

ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತಷ್ಟು ಏರಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಕಳೆದ ಮೂರು ದಿನಗಳಿಂದ ಸತತವಾಗಿ ಏರುತ್ತಿದ್ದು, ಇಂದು ಕೂಡ ಮತ್ತೆ ಏರಿಕೆಯಾಗಿದೆ. ಲೀಟರ್ ಪೆಟ್ರೋಲ್ ದರ ಇಂದು 35 ಪೈಸೆ ಹೆಚ್ಚಳವಾಗಿದ್ದರೆ, ಡೀಸೆಲ್ ದರ 35 ಪೈಸೆ ಹೆಚ್ಚಳವಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 108.64 ರೂಪಾಯಿ ಇದ್ದರೆ ಡೀಸೆಲ್ ದರ 97.37 ರೂಪಾಯಿ ಆಗಿದೆ. ಲಕ್ನೋದಲ್ಲಿ ಲೀಟರ್ ಪೆಟ್ರೋಲ್ ದರ 105.22 ರೂ ಆಗಿದ್ದರೆ ಡೀಸೆಲ್ ದರ 97.48 ರೂ ಆಗಿದೆ.

Home add -Advt

ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್ ಗೆ 114.47 ರೂಪಾಯಿ ಇದ್ದರೆ ಡೀಸೆಲ್ ದರ 105.49 ರೂಪಾಯಿ ಇದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 112.06 ರೂಪಾಯಿ ಹಾಗೂ ಡೀಸೆಲ್ ದರ 105.49 ರೂಪಾಯಿ ಆಗಿದೆ.
ಹೆಚ್ಚುತ್ತಿದೆ ಡೆಂಘಿ ಅಟ್ಟಹಾಸ; 73 ಪ್ರಕರಣ ಪತ್ತೆ; ಐವರು ಬಲಿ

Related Articles

Back to top button