Latest

ಮತ್ತಷ್ಟು ಏರಿಕೆಯಾದ ಪೆಟ್ರೋಲ್-ಡೀಸೆಲ್ ದರ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪೆಟ್ರೋಲ್-ಡೀಸೆಲ್ ದರ ಇಂದು ಕೂಡ ಏರಿಕೆಯಾಗಿದ್ದು, ಕಳೆದ 6 ದಿನಗಳಿಂದ ಸತತವಾಗಿ ತೈಲ ದರ ಏರಿಕೆಯಾಗುತ್ತಿದೆ.

ಪೆಟ್ರೋಲ್ ದರ ಲಿಟರ್ ಗೆ 30 ಪೈಸೆ ಹಾಗೂ ಡೀಸೆಲ್ ಲೀಟರ್ ಗೆ 47 ಪೈಸೆ ಏರಿಕೆಯಾಗಿದೆ. ದೆಹಲಿಯಲ್ಲಿ ಇಂದು ಲೀಟರ್ ಪೆಟ್ರೋಲ್ ದರ 104.14 ರೂಪಾಯಿ ಹಾಗೂ ಡೀಸೆಲ್ ಲೀಟರ್ ಗೆ 92.82 ರೂಪಾಯಿ ಏರಿಕೆಯಾಗಿದೆ.

Home add -Advt

ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 110.12 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 100.66 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 104.80 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.93 ರೂಪಾಯಿ ಆಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 107.77 ರೂಪಾಯಿ ಆಗಿದೆ. ಹೈದರಾಬಾದ್ ನಲ್ಲಿ ಲೀಟರ್ ಪೆಟ್ರೋಲ್ ದರ 108.33 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 101.27 ರೂಪಾಯಿ ಆಗಿದೆ.
ಗಾಂಜಾ ಮಾರಾಟದಲ್ಲಿ ತೊಡಗಿದ್ದ ಪೊಲೀಸರು; ಇನ್ಸ್ ಪೆಕ್ಟರ್ ಸೇರಿ 7 ಜನರು ಸಸ್ಪೆಂಡ್

Related Articles

Back to top button