
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಇಂದು ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಮತ್ತೆ ಏರಿಕೆಯಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಂದ ಎಲ್ಲಾ ಮಹಾನಗರಗಳಲ್ಲಿ ತೈಲ ದರ ಏರಿಕೆ ಮಾಡಲಾಗಿದೆ.
ಲೀಟರ್ ಪೆಟ್ರೋಲ್ ದರ 21ರಿಂದ 25 ಪೈಸೆ ಹೆಚ್ಚಳವಾಗಿದ್ದರೆ, ಡೀಸೆಲ್ ದರ 30ರಿಂದ 32 ಪೈಸೆ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 102.64 ರೂಪಾಯಿ ಆಗಿದೆ. ಡಿಸೆಲ್ 94.17 ರೂಪಾಯಿ ಆಗಿದೆ.
ಮುಂಬೈನಲ್ಲಿ ಲೀಟರ್ ಪೆಟ್ರೋಲ್ 108.67 ರೂ, ಡೀಸೆಲ್ ದರ 98.80 ರೂಪಾಯಿ, ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರ್ ಗೆ 100.23 ರೂ ಹಾಗೂ ಡೀಸೆಲ್ 95.59 ರೂಪಾಯಿ ಆಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 105.95 ರೂಪಾಯಿ ಆಗಿದೆ.
ರೈತರ ಮೇಲೆ ಹರಿದ ಎರಡು ಕಾರು; ಭೀಕರ ದೃಶ್ಯದ ವಿಡಿಯೋ ವೈರಲ್