Kannada NewsKarnataka NewsLatest
*ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ: ಪಿಜಿ ಮಾಲೀಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ವಾರದ ಹಿಂದಷ್ಟೇ ಪಿಜಿಗೆ ಬಂದಿದ್ದ ಯುವತಿಯ ಮೇಲೆ ಪಿಜಿ ಮಾಲೀಕನೇ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಬನಶಂಕರಿಯ ಎರಡನೇ ಹಂತದಲ್ಲಿರುವ ಪಿಜಿಯಲ್ಲಿ ಈ ಘಟನೆ ನಡೆದಿದೆ. ಪಿಜಿಯಲ್ಲಿದ್ದ ಬೇರೊಬ್ಬ ಯುವತಿಯ ಉಂಗುರ ಕಾಣೆಯಾಗಿತ್ತು. ಇದಕ್ಕೆ ವಿಚಾರಣೆಯ ನೆಪದಲ್ಲಿ ಪಿಜಿಗೆ ಹೊಸದಾಗಿ ಬಂದಿದ್ದ ಯುವತಿಯ ಮೇಲೆ ಮಾಲೀಕ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.
ಘಟನೆಯಿಂದ ನೊಂದ ಯುವತಿ ಮೈಕೋ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಿಜಿ ಮಾಲೀಕ ರವಿತೇಜನನ್ನು ಬಂಧಿಸಿದ್ದಾರೆ.




