Film & EntertainmentKannada NewsKarnataka News

*ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಬೆಂಕಿ: ನಟನಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಅವಘಡಗಳು ಹೆಚ್ಚುತ್ತಿವೆ. ಕನ್ನಡದ ಫೀನಿಕ್ಸ್ ಸಿನಿಮಾ ಚಿತ್ರೀಕರಣದ ವೇಳೆ ಬೆಂಕಿ ಅವಘಡ ಸಂಭವಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಿನಿಮಾದ ಕೊನೇ ಹಂತದ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ ಚಿತ್ರೀಕರಣದ ವೇಳೆ ಬೆಂಕಿಯಿಂದಾಗಿ ನಟ ಭಾಸ್ಕರ್ ಶೆಟ್ಟಿ ಕಾಲಿಗೆ ಗಾಯಗಳಾಗಿವೆ.

ಈ ಬಗ್ಗೆ ನಟ ಭಾಸ್ಕರ್ ಶೆಟ್ಟಿ ಪ್ರತಿಕ್ರಿಯಿಸಿದ್ದು, ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಂಡೇ ಚಿತ್ರೀಕರಣ ಮಾದುತ್ತಿದೆವು. ಆದರೂ ಸಣ್ಣ ಗಾಯವಾಯಿತು. ಈಗ ವಾಸಿಯಾಗುತ್ತಿದೆ. ಯಾವುದೇ ಗಂಭೀರವಾದ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button