Kannada NewsKarnataka NewsLatest

*8 ತಿಂಗಳ ಗರ್ಭಿಣಿಯ ಫೋಟೋ ಶೂಟ್ ವೇಳೆ ದುರಂತ: ನೀರಿನಲ್ಲಿ ಮುಳುಗಿ ಮೊದಲ ಮಗು ಸಾವು*

ಪ್ರಗತಿವಾಹಿನಿ ಸುದ್ದಿ: ಎರಡನೇ ಮಗುವಿನ ಆಗಮದ ಸಂಭ್ರಮದಲ್ಲಿದ್ದ 8 ತಿಂಗಳ ಗರ್ಭಿಣಿ ಫೋಟೋ ಶೂಟ್ ವೇಳೆ ಆಕೆಯ ಮೊದಲ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಗಳೂರು ಹೊರವಲಯದ ಗಿಡ್ಡೇನಹಳ್ಳಿಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಈ ದುರಂತ ಸಂಭವಿಸಿದೆ. 8 ತಿಂಗಳ ಗರ್ಭಿಣಿ ತನ್ನ ಮೊದಲ ಮಗು ಹಾಗೂ ಸ್ನೇಹಿತೆಯ ಜೊತೆ ರೆಸಾರ್ಟ್ ಗೆ ಬಂದಿದ್ದರು. ಇಂದು ಗರ್ಭಿಣಿಯ ಫೋಟೋಶೂಟ್ ಇತ್ತು. ಹಾಗಾಗಿ ಫೋಟೋ ಶೂಟ್ ನಲ್ಲಿ ಬ್ಯುಸಿಯಿದ್ದ ಮಹಿಳೆ ತನ್ನ ಮೊದಲ ಮಗುವಿನ ಕಡೆಗೆ ಗಮನಹರಿಸದೇ ನಿರ್ಲಕ್ಷ ಮಾಡಿದ್ದಾಳೆ.

ತನ್ನ ಪಾಡಿಗೆ ಆಟವಾಡುತ್ತಿದ್ದ ಮಗು ರೆಸಾರ್ಟ್ ನಲ್ಲಿ ನೀರಿಗೆ ಬಿದ್ದು ಸಾವನ್ನಪ್ಪಿದೆ. ಎಷ್ಟು ಹೊತ್ತಾದರೂ ಮಗು ಕಾಣದಿದ್ದಾಗ ಹುಡುಕಾಟ ನಡೆಸಿದ್ದಾಳೆ ಗರ್ಭಿಣಿ. ಈ ವೇಳೆ ನೀರಿಗೆ ಬಿದ್ದು ಮಗು ಮೃತಪಟ್ಟಿರುವುದು ಗೊತ್ತಾಗಿದೆ. ಮೂರು ವರ್ಷದ ಲಕ್ಷ್ಮೀರ್ ಮೃತ ಮಗು. ಮಹಿಳೆಯ ಪತಿ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿದ್ದರು. ಈ ವೇಳೆಯೇ ಈ ದುರಂತ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button