Latest

ಪಿರಾಮಿಡ್ ಬಳಿ ಫೋಟೋಶೂಟ್; ಮಾಡೆಲ್ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಈಜಿಪ್ಟ್: ಪಿರಮಿಡ್ ಗಳಿಗೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಖ್ಯಾತ ರೂಪದರ್ಶಿ ಸಲ್ಮಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಈಜಿಪ್ಟ್ ನ 4,700 ವರ್ಷಗಳ ಪಿರಮಿಡ್ ಆಫ್ ಜೂಸರ್ ನಲ್ಲಿ ಪ್ರಾಚೀನ ಉಡುಪು ಧರಿಸಿ ಮಾಡೆಲ್ ಸಲ್ಮಾ ಅಲ್-ಶಮಿ ಫೋಟೋಗೆ ಪೋಸ್ ನೀಡಿದ್ದರು. ಈ ಫೋಟೋಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಪಿರಮಿಡ್ ಬಳಿ ಫೋಟೋ ಶೂಟ್ ಮಾಡುವ ಮೂಲಕ ಅಗೌರವ ತೋರಲಾಗಿದೆ ಎಂದು ಸಲ್ಮಾ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸಲ್ಮಾ ಹಾಗೂ ಛಾಯಾಗ್ರಾಹಕ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button