ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಾರಿವಾಳ ಹಿಡಿಯಲು ಹೋದ ಇಬ್ಬರು ಬಾಲಕರು ವಿದ್ಯುತ್ ತಂತಿ ಸ್ಪರ್ಶಿಸಿ ಕರೆಂಟ್ ಶಾಕ್ ನಿಂದ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.
ಬಾಲಕರಾದ ಸುಪ್ರೀತ್ ಹಾಗೂ ಚಂದ್ರು ಗಾಯಾಳುಗಳು. ಆಟವಾಡುತ್ತಿದ್ದ ಬಾಲಕರಿಬ್ಬರಿಗೂ ವಿದ್ಯುತ್ ತಂತಿ ಮೇಲೆ ಕುಳಿತಿದ್ದ ಪಾರಿವಾಳವನ್ನು ಹಿಡಿಯುವ ಆಸೆಯಾಗಿದೆ. ಇಬ್ಬರೂ ಮಕ್ಕಳು ಮಹಡಿ ಮೇಲೆ ಹತ್ತಿ ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ಕುಳಿತಿದ್ದ ಪಾರಿವಾಳ ಹಿಡಿಯಲೆಂದು ಕಬ್ಬಿಣದ ರಾಡ್ ನಿಂದ ವಿದ್ಯುತ್ ತಂತಿ ಮುಟ್ಟಿದ್ದಾರೆ. ತಕ್ಷಣ ಕರೆಂಟ್ ಪ್ರವಹಿಸಿದೆ. ಇಬ್ಬರು ಬಾಲಕರು ಕಂರೆಂಟ್ ಶಾಕ್ ಗೆ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿ ತಲುಪಿದ್ದಾರೆ.
ವಿದ್ಯುತ್ ತೀವ್ರತೆಗೆ ,ಅನೆಯಲ್ಲಿದ್ದ ಎಲೆಕ್ಟ್ರಿಕ್ ಉಪಕರಣಗಳು ಸುಟ್ಟು ಹೋಗಿವೆ. ಗಾಯಾಳು ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕ ಚಂದ್ರುಗೆ ಶೇ.90ರಷ್ಟು ಸುಟ್ಟಗಾಯಗಳಾಗಿದ್ದು, ಸುಪ್ರೀತ್ ಗೆ ಶೇ.70ರಷ್ಟು ಸುಟ್ಟಗಾಯಗಳಾಗಿವೆ. ಮಕ್ಕಳ ಸ್ಥಿತಿ ಚಿಂತಾಜನಕವಾಗಿದ್ದು, ಕುಟುಂಬದವರು ಮಕ್ಕಳ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.
ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ APMC ಲೆಕ್ಕಪರಿಶೋಧಕ
https://pragati.taskdun.com/vijayapuraapmc-accountetlokayuktaarrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ