
ಪ್ರಗತಿವಾಹಿನಿ ಸುದ್ದಿ: ಖಾಸಗಿ ವಿಮಾನಯಾನ ಸಂಸ್ಥೆಯ ಪೈಲಟ್ ಕ್ಯಾಬಿನ್ ಸಿಬ್ಬಂದಿ ಮೇಲೆ ಅತ್ಯಾಚರ ಎಸೆಗೆದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಪೈಲಟ್ ಮೇಲೆ ದೂರು ದಾಖಲಾಗಿದೆ.
ಬೆಂಗಳೂರಿನ ಹೋಟೆಲೊಂದರಲ್ಲಿ ತಮ್ಮ ಮೇಲೆ ವಿಶೇಷ ವಿಮಾನದ ಪೈಲಟ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಕ್ಯಾಬಿನ್ ಸಿಬ್ಬಂದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ನವೆಂಬರ್ 18 ರಂದು ಆರೋಪಿ ಪೈಲಟ್ ರೋಹಿತ್ ಸರನ್ ತನ್ನ ಸಹೋದ್ಯೋಗಿ ಸಂತ್ರಸ್ಥೆ ಜೊತೆ ಹೈದರಾಬಾದ್‌ನ ಬೇಗಂಪೇಟೆ ಮತ್ತು ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಚಾರ್ಟರ್ಡ್ ವಿಮಾನದಲ್ಲಿ ಹೋಟೆಲ್‌ಗೆ ಆಗಮಿಸಿದಾಗ ಈ ಘಟನೆ ನಡೆದಿದೆ.
ಇಬ್ಬರು ಪೈಲಟ್‌ಗಳು ಮತ್ತು ಸಂತ್ರಸ್ಥೆ ನವೆಂಬರ್ 19 ರಂದು ಪುಟ್ಟಪರ್ತಿಗೆ ಹಿಂತಿರುಗಬೇಕಿತ್ತು ಮಾರ್ಗಮಧ್ಯೆ ಸ್ವಲ್ಪ ವಿಶ್ರಾಂತಿಗಾಗಿ ಹೋಟೆಲ್‌ಗೆ ಬಂದಿದ್ದರು.
ತನ್ನ ದೂರಿನಲ್ಲಿ, ರೋಹಿತ್ ಧೂಮಪಾನಕ್ಕಾಗಿ ಹೊರಗೆ ಹೋಗುವ ನೆಪದಲ್ಲಿ ತನ್ನ ಹೋಟೆಲ್ ಕೋಣೆಯ ಬಳಿಗೆ ಕರೆದೊಯ್ದಿದ್ದಾನೆ ಎಂದು ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಬಲವಂತವಾಗಿ ಕೋಣೆಯೊಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ
ನವೆಂಬರ್ 20 ರಂದು ಬೇಗಂಪೇಟೆಗೆ ಹಿಂತಿರುಗಿದ ನಂತರ, ಸಂತ್ರಸ್ಥೆ ತಕ್ಷಣ ವಿಮಾನಯಾನ ಸಂಸ್ಥೆಯ ಆಡಳಿತವನ್ನು ಸಂಪರ್ಕಿಸಿ ಬೇಗಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾಳೆ.
ಭಾರತೀಯ ನ್ಯಾಯ ಸಂಹಿತಾ (ಅತ್ಯಾಚಾರ ಅಪರಾಧ) ಸೆಕ್ಷನ್ 63 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಬೆಂಗಳೂರು ನಗರದ ಹಲಸೂರು ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




