Kannada NewsKarnataka NewsLatest

*ಮತ್ತೆ ಲ್ಯಾಂಡ್ ಆಗದೆ 40 ನಿಮಿಷ ಆಕಾಶದಲ್ಲೆ ಹಾರಾಟ ನಡೆಸಿದ ವಿಮಾನ*

ಪ್ರಗತಿವಾಹಿನಿ ಸುದ್ದಿ: ಕೆಲ ದಿನಗಳ ಹಿಂದೆ ಎರಡು ಬಾರಿ ಲ್ಯಾಂಡಿಂಗ್ ಸಮಸ್ಯೆ ಎದುರಿದ ವಿಮಾನ ನಿನ್ನೆ  ಮತ್ತೆ 40 ನಿಮಿಷ ಆಕಾಶದಲ್ಲೇ ಗಿರಕಿ ಹೊಡೆದಿದೆ.

 ‘FLY91’ ವಿಮಾನ ಲ್ಯಾಂಡಿಂಗ್‌ ವೇಳೆ ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ವಿಮಾನವು ಸುಮಾರು 40 ನಿಮಿಷಗಳ ಕಾಲ ಆಕಾಶದಲ್ಲೇ ಹಾರಾಟ ನಡೆಸಿದ ಘಟನೆ ವರದಿಯಾಗಿದೆ. ನೆನ್ನೆ ಮಧ್ಯಾಹ್ನ 3.13ರಲ್ಲಿ ಹೈದರಾಬಾದ್ ನಿಂದ ಈ ಒಂದು ವಿಮಾನ ಹೊರಟಿತ್ತು ಸಂಜೆ 4:30ಕ್ಕೆ ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡ್ ಆಗಬೇಕಿತ್ತು, ಆದರೆ ಸಂಜೆ 5. 09 ನಿಮಿಷಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಿದೆ. ಹೆಚ್ಚು 40 ನಿಮಿಷ ಆಕಾಶದಲ್ಲಿ ವಿಮಾನ ಹಾರಾಟ ನಡೆಸಿದೆ. 

Home add -Advt

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ FLY91 ವಿಮಾನವು ಲ್ಯಾಂಡಿಂಗ್ ಗೇರ್ ಅಥವಾ ಇತರ ತಾಂತ್ರಿಕ ಸಮಸ್ಯೆಯಿಂದಾಗಿ ನಿಗದಿತ ಸಮಯದಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ವಿಮಾನವು ಸುಮಾರು 40 ನಿಮಿಷಗಳ ಕಾಲ ನಗರದ ಆಗಸದಲ್ಲಿಯೇ ಸುತ್ತು ಹೊಡೆದಿದ್ದರಿಂದ ಪ್ರಯಾಣಿಕರಲ್ಲಿ ಆತಂಕ ಮನೆಮಾಡಿತ್ತು.

ಪೈಲಟ್ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುವಲ್ಲಿ ಯಶಸ್ವಿಯಾದ ನಂತರ ಅಥವಾ ಭದ್ರತಾ ಪ್ರೋಟೋಕಾಲ್ ಪಾಲಿಸಿದ ಬಳಿಕ ವಿಮಾನವು ಸುರಕ್ಷಿತವಾಗಿ ರನ್‌ವೇ ಮೇಲೆ ಇಳಿದಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

Related Articles

Back to top button