ಜುಲೈ 15 ಅಂತರಾಷ್ಟ್ರೀಯಯ ಪ್ಲಾಸ್ಟಿಕ್ ಸರ್ಜರಿ ದಿನ
ಪ್ರಗತಿವಾಹಿನಿ ಸುದ್ದಿ; ಪ್ಲಾಸ್ಟಿಕ್ ಸರ್ಜರಿಯ ಇತಿಹಾಸ ಪ್ರಾರಂಭವಾಗಿದ್ದು ನಮ್ಮದೇಶ ಭಾರತದಿಂದ. ಸಾವಿರಾರು ವರ್ಷಗಳ ಹಿಂದೆ ಅನೇಕ ವಿಧಾನಗಳಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡುವದರಲ್ಲಿ ಸುಶ್ರೂತ ಸಂಹಿತ ಎಂಬ ಋಷಿಗಳು ನಿಪೂಣರಾಗಿದ್ದರು. ಅದರಅರ್ಥ ಪ್ಲಾಸ್ಟಿಕ್ ಸರ್ಜರಿಯ ಹುಟ್ಟು ಭಾರತದಲ್ಲಿ ಅಂದರೆ ತಪ್ಪೇನಿಲ್ಲ.
ಸುಮಾರು 2 ಸಾವಿರ ವರ್ಷಗಳ ಹಿಂದೆ ನಮ್ಮದೇಶದ ಕೆಕಲವು ರಾಜರು ಕಳ್ಳತನ ಮಾಡಿದ ಆರೋಪಗಳಿಗೆ ಅವರ ಮೂಗನ್ನು ಕತ್ತರಿಸುವ ಶಿಕ್ಷೆಯನ್ನು ಕೊಡುತ್ತಿದ್ದರು. ಆರೋಪಿಗಳ ಮುಖ ತುಂಬ ಕುರೂಪಿಯಾಗಿಕಾಣುತ್ತಿತ್ತು, ಅದನ್ನು ನೋಡಿದ ಋಷಿಮುನಿ ಸುಶ್ರೂತ ಸಂಹಿತ ಅವರು ಆ ಮೂಗು ಕತ್ತರಿಸಿದ ರೋಗಿಗಳನ್ನು ತಮ್ಮ ಆಶ್ರಮದಲ್ಲಿ ಆಶ್ರಯಕೊಟ್ಟು, ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಕತ್ತರಿಸಿದ ಮೂಗನ್ನು ಹಣೆಯ ಮತ್ತು ಗಲ್ಲದ ಮಾಂಸ ಹಾಗೂ ಚರ್ಮವನ್ನು ಉಪಯೋಗಿಸಿ ಹೊಸ ಮೂಗನ್ನು ತಯಾರಿಸುತ್ತಿದ್ದರು. ಅದೇ ವಿಧಾನವನ್ನು ನಾವು ಇಂದು ಫೊರ್ ಹೆಡ್, ಪ್ಲಾಪ್ ಮತ್ತು ಚೆಕ್ ಪ್ಲಾಪ್‌ಎಂದು ಕರೆಯುತ್ತೇವೆ. ಈ ವಿಧಾನಗಳನ್ನು ಅನುಸರಿಸಿ ಜಗತ್ತಿನ ಎಲ್ಲ ಪ್ಲಾಸ್ಟಿಕ್ ಸರ್ಜರಿ ತಜ್ಞರು ಸಾವಿರಾರು ರೋಗಿಗಳಿಗೆ ಈ ವಿಧಾನ ಉಪಯೋಗಿಸಿ ಅವರ ತೊಂದರೆಯನ್ನು ಸರಿ ಮಾಡಿದ್ದಾರೆ.
ಅದೇ ತತ್ವಗಳನ್ನು ಅನುಸರಿಸಿ ದೇಹದ ಯಾವುದೇ ಭಾಗವು ತುಂಡಾದಾಗ ಅಥವಾ ಕ್ಯಾನ್ಸರದಿಂದ ತೆಗೆದಾಗ ಆ ಅಂಗವನ್ನು ಹೊಸದಾಗಿ ತಯಾರಿಸಲು ಉಪಯೋಗಿಸುವರು.
ಆಗಿನ ತತ್ವಗಳು ಮತ್ತು ಈಗಿನ ಅತ್ಯಾಧುನಿಕ ಯಂತ್ರಗಳಾದ ಮೈಕ್ರೊಸ್ಕೋಪ್ ಮತ್ತು ಲೇಸರಗಳನ್ನು ಉಪಯೋಗಿಸಿ, ರಸ್ತೆ ಸಂಚಾರದಲ್ಲಿ ಅಪಘಾತದ ಗಾಯಾಳು, ಕೆಲಸದ ಸ್ಥಳದಲ್ಲಿ ಯಂತ್ರೋಪಕರಣಗಳಿಂದ ಉಂಟಾದ ಗಾಯಗಳು, ಬೆರಳುಗುಳು ಕತ್ತರಿಸಿದಾಗ ಅವುಗಳನ್ನು ಮರುಜೋಡಿಸುವದು, ಕ್ಯಾನ್ಸರದಿಂದ ಯಾವುದೇ ಭಾಗವನ್ನು ತೆಗೆದಾಗ ಆ ಭಾಗವನ್ನು ಪ್ಲಾಸ್ಟಿಕ್ ಸರ್ಜರಿ ಮುಖಾಂತರ ರೋಗಿಯ ಬೇರೆ ಅಂಗಗಳಾದ ತೊಡೆಯ ಮಾಂಸ, ಕೈ ಮತ್ತು ಕಾಲಿನ ಮೂಳೆ ಹಾಗೂ ಚರ್ಮ ಉಪಯೋಗಿಸಿ ತೆಗೆಯಲ್ಪಟ್ಟ ಭಾಗಗಳನ್ನು ಮರುಸೃಷ್ಠಿಸಲಾಗುವದು.
ಮಧುಮೇಹ ಮತ್ತು ವೆರಿಕೋಸ ವೇನ್ ಗಳಿಂದ ಯಾವುದೇ ರೀತಿಯ ಗಾಯಗಳನ್ನು ಪ್ಲಾಸ್ಟಿಕ್ ಸರ್ಜರಿ ಮತ್ತು ಲೇಸರ ಮುಖಾಂತರ ಸರಿಪಡಿಸುವದು ದೇಹದ ಎಲ್ಲ ತರಹದ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳಾದ ಮುಖ, ಕಣ್ಣು, ಸ್ತನ, ಹೊಟ್ಟೆಯ ಬೊಜ್ಜು, ಹಾಗೂ ಸಾವಿರಾರು ಸೌಂದರ್ಯವರ್ಧಕ ಚಿಕಿತ್ಸೆಗಳನ್ನು ಪ್ಲಾಸ್ಟಿಕ್ ಸರ್ಜರಿ ಮುಖಾಂತರ ಜನರ ಸೌಂದರ್ಯವನ್ನು ಹೆಚ್ಚಿಸಬಹುದು.
ಲೇಖನ: ಡಾ. ದರ್ಶನರಜಪೂತ ಪ್ರೊ. ಪ್ಲಾಸ್ಟಿಕ್ ಸರ್ಜರಿ ಮತ್ತುರಿಕನ್ಸಟ್ರಿಕ್ಟಿವ್ ಸರ್ಜಿರಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ