Kannada NewsKarnataka NewsLatest

ಡಿಸೆಂಬರ್ ನಲ್ಲಿ ಎಸ್.ಕೆ.ಇ. ಸಂಸ್ಥೆಯ ಅಮೃತಮಹೋತ್ಸವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಬೆಳಗಾವಿಯ ಸೌತ್ ಕೊಂಕಣ ಶಿಕ್ಷಣ ಸಂಸ್ಥೆಗೆ ೭೫ ಸಂವತ್ಸರಗಳು ತುಂಬುತ್ತಿವೆ. ಇದು ಆರ್.ಪಿ.ಡಿ. ಕಾಲೇಜು, ಜಿ.ಎಸ್.ಎಸ್.ಕಾಲೇಜು, ಟಿಳಕವಾಡಿ ಹೈಸ್ಕೂಲ, ಸ್ವಾಧ್ಯಾಯ ವಿದ್ಯಾ ಮಂದಿರ, ಎಮ್.ಆರ್.ಭಂಡಾರಿ ಶಾಲೆ, ವಿ.ಎಂ.ಶಾನಭಾಗ ಶಾಲೆ, ಮೊದಲಾದ ತನ್ನ ೧೮ ಅಂಗ ಸಂಸ್ಥೆಗಳ ಮೂಲಕ ಹೆಮ್ಮರವಾಗಿ ಬೆಳೆದು ೭೫ ನೇ ಅಮೃತ ಸಂವತ್ಸರದಲ್ಲಿ ಮುನ್ನಡೆದಿದೆ.

೭೫ ಸಂವತ್ಸರಗಳು ತುಂಬುತ್ತಿರುವ ಈ ಪ್ರಸ್ತುತ ವರ್ಷದ ಸಂದರ್ಭದಲ್ಲಿ ಸಂಸ್ಥೆಯು ತನ್ನ ಅಂಗ ಸಂಸ್ಥೆಗಳ ಮೂಲಕ ವರ್ಷದುದ್ದಕ್ಕೂ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಬರುವ ಡಿಸೆಂಬರ್ – ೨೧ ಹಾಗೂ ೨೨ ರಂದು ತನ್ನ ಅಂಗಸಂಸ್ಥೆಗಳ ಮತ್ತು ಅವುಗಳ ಹಳೆಯ ವಿದ್ಯಾರ್ಥಿ ಸಂಘಟನೆಗಳ ಸಹಯೋಗದಲ್ಲಿ ಅಮೃತ ಮಹೋತ್ಸವ ವರ್ಷಾಚರಣೆಯನ್ನು  ವಿಜೃಂಭಣೆಯಿಂದ ಆಚರಿಸುವ ಯೋಜನೆ ಹಮ್ಮಿಕೊಂಡಿದೆ.

ಸಂಸ್ಥೆಯನ್ನು ಬೆಳೆಸಿದ ಮಹನೀಯರ ಸ್ಮರಣೆ ಹಾಗೂ ಇಲ್ಲಿಯವರೆಗಿನ ತನ್ನ ಸಾಧನೆಯ ಅವಲೋಕನವನ್ನು ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ನಡೆಯವ ಈ  ಸಮಾರಂಭದಲ್ಲಿ ೨೧-೧೨-೨೦೧೯ ರಂದು –  ಹಳೆಯ ವಿದ್ಯಾರ್ಥಿಗಳ ವಿಶೇಷ ಸಾಂಸ್ಕೃತಿಕ ಸಮಾವೇಶವು ನಡೆಯಲಿದೆ. ಹಳೆಯ ವಿದ್ಯಾರ್ಥಿಗಳಿಂದ ಭಾವ ಚಿತ್ರ ಪ್ರದರ್ಶನ, ಸೆಲ್ಫಿ ಕಾರ್ನರ್, ಹಾಡು, ನೃತ್ಯ ಇತ್ಯಾದಿ ಕಾರ್ಯಕ್ರಮಗಳು, ೨೨-೧೨-೨೦೧೯ ರಂದು – ಅತಿಥಿ ಗಣ್ಯರಿಂದ ಸಾರ್ವಜನಿಕ ಉಪನ್ಯಾಸಗಳು ಮತ್ತು ಸಂಸ್ಥೆಯ ಸಾಧನೆಗಳ ನೋಟಗಳು, ಸಂಜೆಯ ವೇಳೆಗೆ ಪ್ರಸಿಧ್ದ ನೃತ್ಯಪಟು ಪಾರ್ಶ್ವನಾಥ ಉಪಾಧ್ಯ ಹಾಗೂ ತಂಡದವರಿಂದ ನೃತ್ಯ ಕಾರ್ಯಕ್ರಮಗಳು ಹಬ್ಬದೋಪಾದಿಯಲ್ಲಿ ಜರುಗಲಿವೆ.

ಸಮಾರಂಭದಲ್ಲಿ ಪಾಲ್ಗೊಳ್ಳುವ  ಸಂಸ್ಥೆಯ ಹಳೆ ವಿದ್ಯಾರ್ಥಿಗಳು ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷೆ  ಬಿಂಬಾ ನಾಡಕರ್ಣಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಪ್ರೊ. ಪ್ರಸನ್ನ ಜೋಶಿ ಆರ್.ಪಿ.ಡಿ. ಪದವಿ ಕಾಲೇಜ್ – ೯೮೪೪೫೨೨೦೦೫, ಪ್ರೊ. ಪವನ್‌ಕುಮಾರ ಆರ್.ಪಿ.ಡಿ. ಪಿ.ಯು. ಕಾಲೇಜ್ – ೮೯೦೪೭೩೧೯೫೦, ಪ್ರೊ. ಎಸ್.ಎನ್. ದೇಸಾಯಿ ಜಿ.ಎಸ್.ಎಸ್.ಪಿ.ಯು. ಕಾಲೇಜ್ – ೯೪೪೮೮೭೫೬೨೦, ಪ್ರೊ. ಬಿ.ಎಂ.ತೋಪಿನಕಟ್ಟಿ ಜಿ.ಎಸ್.ಎಸ್. ಪದವಿ ಕಾಲೇಜ್ – ೯೪೪೮೮೭೫೪೨೯,   ಶ್ವೇತಾ ಚಿಕ್ಕಮಠ – ಎಮ್.ಆರ್.ಭಂಢಾರಿ ಶಾಲೆ – ೯೬೬೩೩೯೩೯೯೩,  ಸಮೀರ್ ಜೋಶಿ ಸ್ವಾಧ್ಯಾಯ ವಿದ್ಯಾಮಂದಿರ – ೯೪೪೮೭೫೮೩೯೬, ಪ್ರಿ. ಸಿ.ವಾಯ್. ಪಾಟೀಲ ಟಿಳಕವಾಡಿ ಹೈಸ್ಕೂಲ – ೯೯೮೦೪೩೨೭೯೩,   ಅಭಿಜಿತ್ ದೇಶಪಾಂಡೆ, ವಿ.ಎಂ.ಶಾನಭಾಗ ಶಾಲೆ – ೮೦೭೩೯೦೮೫೩೪,  ರಾಮಕೃಷ್ಣ ಎನ್. ಎಸ್.ಕೆ.ಇ. ಸೊಸೈಟಿ ಸ್ಪೋರ್ಟ್ಸ ಆಕಾಡೆಮಿ – ೯೯೮೬೧೦೮೩೬೯ ಅವರುಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button