ಪಿಎಲ್ ಡಿ ಬ್ಯಾಂಕ್ ಸದಸ್ಯತ್ವ ಹೆಸರಲ್ಲಿ ಅನಧಿಕೃತವಾಗಿ ಹಣ ವಸೂಲಿ : ಶಿಲೆದಾರ ಆರೋಪ
ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು – ಕಿತ್ತೂರು ತಾಲೂಕಿಗೆ ಪಿಎಲ್ ಡಿ ಬ್ಯಾಂಕ್ ಬಂದಿದ್ದು ಹೆಮ್ಮೆಯ ವಿಷಯ. ಆದರೆ ಇಲ್ಲಿ ನೂತನವಾಗಿ ಸದಸ್ಯತ್ವ ಮಾಡುತ್ತೇನೆ ಎಂದು ಅನಧಿಕೃತ ಹಣ ವಸೂಲಿ ಮಾಡಿ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಹಬೀಬ್ ಶಿಲೆದಾರ ಆರೋಪಿಸಿದ್ದಾರೆ.
ಪಟ್ಡಣದ ಪ್ರತಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸದಾಗಿ ಪ್ರಾರಂಭವಾಗಿದ ಪಿಎಲ್ ಡಿ ಬ್ಯಾಂಕ್ ಸರ್ಕಾರದ ನಿರ್ದೆಶನದಂತೆ ಹೊಸದಾಗಿ ಸದಸ್ಯರನ್ನು ಮಾಡಬೇಕು ಎಂದು ಪ್ರಾರಂಭಿಸಿದರು. ಅದೇ ರೀತಿ ನಾವು ಬ್ಯಾಂಕಿಗೆ ಹೋಗಿ ಎಲ್ಲ ರೀತಿ ಮಾಹಿತಿ ಹೇಳಿ ಅದರಂತೆ ಆಧಾರ ಕಾರ್ಡ, ೧೬೦/೩. ೧ ಎಕರೆ ೩೯ ಗೂಟೆ ಜಮೀನಿನ ಉತಾರ ಹಾಗೂ ೧೪೦೦ ರೂ. ಹಣವನ್ನು ಬ್ಯಾಂಕ್ ಸಿಬ್ಬಂದಿ ಬಳಿ ನೀಡಿದ್ದೇವೆ. ಆದರೆ ಸದಸ್ಯತ್ವಕ್ಕೆ ಹಣ ನೀಡಿದ್ದಕ್ಕೆ ಯಾವುದೇ ರಸೀದಿ ಕೂಡಾ ಕೊಟ್ಟಿಲ್ಲ.
ಅಂಬಡಗಟ್ಟಿ ಗ್ರಾಮದಲ್ಲಿ ಒಟ್ಟು ೪ ಜನರು ರೈತರು ಸದಸ್ಯತ್ವ ಪಡೆಯಲು ದಾಖಲಾತಿ ಕೊಟ್ಟು, ಫೀ ತುಂಬಿದರು. ಆದರೆ ಅದರಲ್ಲಿ ೩ ರೈತರ ಹೆಸರು ಮತದಾರ ಪಟ್ಟಿಯಲ್ಲಿ ಇದ್ದು, ನನ್ನ ಹೆಸರು ಮಾತ್ರ ಪಟ್ಡಿಯಲ್ಲಿ ಇಲ್ಲ ಎಂದು ಶಿಲೆದಾರ ಹೇಳಿದರು.
ಇದು ರಾಜಕಿಯ ವ್ಯಕ್ತಿಗಳು ಒತ್ತಡಕ್ಕೆ ಮಣಿದು ಪಿಎಲ್ ಡಿ ಬ್ಯಾಂಕ್ ಅಧಿಕಾರಿಗಳು ನಮಗೆ ಅನ್ಯಾಯ ಮಾಡಿದ್ದಾರೆ. ಇದೇ ರೀತಿ ತಾಲೂಕಿನಲ್ಲಿ ಬಹುತೇಕ ರೈತರಲ್ಲಿ ಸದಸ್ಯತ್ವ ನೀಡುವುದಾಗಿ ಹಣ ವಸೂಲಿ ಮಾಡಿ ಅನ್ಯಾಯ ಮಾಡಿದ್ದಾರೆ ಎಂದರು.
ಆದರೆ ಈಗ ತುರಾತುರಿ ಬ್ಯಾಂಕಿನ ಚುನಾವಣೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಬ್ಯಾಂಕಿನ ಮತದಾರರ ಪಟ್ಡಿಯಲ್ಲಿ ಬಹುತೇಕ ರೈತರ ಹೆಸರು ಬಂದಿಲ್ಲ. ಈ ಬಗ್ಗೆ ಪಿಎಲ್ ಡಿ ಬ್ಯಾಂಕಿಗೆ ಹೋಗಿ ಕೇಳಿದರೆ ನಿಮ್ಮ ಅರ್ಜಿ ಫಾರ್ಮ್ ಎಲ್ಲೊ ಕಳೆದು ಹೊಗಿದೆ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಇವರು ಯಾವುದೇ ಬ್ಯಾಂಕಿನ ನಿಮಾವಳಿಯನ್ನು ಪಾಲಿಸದೇ ಬ್ಯಾಂಕ್ ನಡೆಸುತ್ತಿದ್ದಾರೆ. ಇಲ್ಲಿ ಯಾವುದೇ ರೆಜಿಸ್ಟರ್ ಕೂಡಾ ಬರೆದಿಲ್ಲ ಎಂದು ಆರೋಪಿದ್ದಾರೆ.
ಅಧಿಕಾರಿಗಳು ಈಗ ನಡೆಯುವ ಚುನಾವಣೆಯ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು. ನ್ಯಾಯಯುತವಾಗಿ ರೈತರಿಗೆ ಸದಸ್ಯತ್ವ ಕೊಟ್ಟು ಮತದಾನ ಪಟ್ಡಿಯಲ್ಲಿ ಹೆಸರು ಹಾಕಬೇಕು. ಇಲ್ಲವಾದರೆ ನ್ಯಾಯಾಲಯಕ್ಕೆ ಹೊಗುತ್ತೇವೆ ಎಂದು ಹಬೀಬ್ ಶಿಲೆದಾರ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಎಷ್ಟೋ ರೈತರಿಗೆ ಈ ವಿಷಯದ ಬಗ್ಗೆ ಗೋತಿಲ್ಲ. ಅನ್ಯಾಯವಾದ ರೈತರು 9483585051 ಈ ನಂಬರ್ ಸಂಪರ್ಕಿಸಲು ಹಬೀಬ್ ಶಿಲೆದಾರ ತಿಳಿಸಿದ್ದಾರೆ.
ಈ ಕುರಿತು ಸಹಕಾರ ಸಂಘಗಳ ಇಲಾಖೆಯಲ್ಲಿ ಶಿಲೆದಾರ ಪರ ವಕೀಲರು ಪ್ರಕರಣ ದಾಖಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ