Kannada NewsLatestNationalPolitics

*ದೇಶದ ಜನತೆಗೆ ಭರ್ಜರಿ ಗಿಫ್ಟ್ ನೀಡಿದ ಪ್ರಧಾನಿ ಮೋದಿ: ನಾಳೆಯಿಂದಲೇ ಈ ಎಲ್ಲಾ ವಸ್ತುಗಳ GST ಕಡಿತ*

ಪ್ರಗತಿವಾಹಿನಿ ಸುದ್ದಿ: ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ನವರಾತ್ರಿ ಹಬ್ಬದ ಗಿಫ್ಟ್ ನೀಡಿದ್ದಾರೆ. ನಾಳೆಯಿಂದ ದೇಶಾದ್ಯಂತ ಜಿಎಸ್ ಟಿ ತೆರಿಗೆ ಕಡಿಗೊಳ್ಳಲಿದ್ದು, ಜಿಎಸ್ ಟಿ 2.0 ಜಾರಿಗೆ ಬರಲಿದೆ. ಈ ಮೂಲಕ ದೇಶದ ಪ್ರತಿ ಮನೆಯಲ್ಲಿಯೂ ಉಳಿತಾಯದ ಉತ್ಸವ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜನತೆಗೆ ನವರಾತ್ರಿ ಹಬ್ಬದ ಶುಭ ಕೋರಿದರು. ನಾಳೆ ನವರಾತ್ರಿ ಹಬ್ಬದ ಮೊದಲ ದಿನ. ನಾಳೆ ಸೂರ್ಯೋದಯದಿಂದಲೇ ಜಿಎಸ್ ಟಿ-2.0 ಜಾರಿಗೆ ಬರಲಿದೆ. ಈ ಮೂಲಕ ಅಗತ್ಯ ವಸ್ತುಗಳು, ಔಷಧಿಗಳು, ವಾಹನಗಳ ಬೆಲೆ ಕಡಿಮೆಯಾಗಲಿದೆ ಎಂದು ಘೋಷಿಸಿದರು.

ಜಿಎಸ್ ಟಿ ಸುಧಾರಣೆ ದೇಶದ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ನೀಡಲಿದೆ. ಇದು ಮುಂದಿನ ಪೀಳಿಗೆಯ ಜನರಿಗೆ ಅನುಕೂಲಕರವಾಗಲಿದೆ. ದೇಶದ ಬಡ, ಮಧ್ಯಮ, ನವ ಮಧ್ಯಮ, ರೈತರು, ಮಹಿಳೆಯರು, ಯುವ ಜನತೆ ಹೀಗೆ ಪ್ರತಿಯೊಂದು ವರ್ಗವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜಿಎಸ್ ಟಿ ಕಡಿತ ಮಾಡಲಾಗಿದೆ. ನಮ್ಮ ದೈನಂದಿನ ಬದುಕಿನಲ್ಲಿ ವಿದೇಶಿ ವಸ್ತುಗಳ ಮೇಲಿನ ಅವಲಂಭನೆ ಹೆಚ್ಚಾಗಿದೆ. ಸ್ವದೇಶಿ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡುವ ಮೂಲಕ ದೇಶದ ಬೆಳವಣಿಗೆಗೆ ಒಗ್ಗಟ್ಟಿನ ಮಂತ್ರ ಜಪಿಸಬೇಕು ಎಂದು ಇದೇ ವೇಳೆ ಕರೆ ನೀಡಿದರು.

ಸಮಯ ಬದಲಾದಂತೆ ದೇಶದ ಅಗತ್ಯತೆಯೂ ಬದಲಾಗುತ್ತದೆ. 12 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಹೊಸ ಜಿಎಸ್ ಟಿಯಲ್ಲಿ ಕೇವಲ ಶೇ.5 ಹಾಗೂ ಶೇ. 18 ತೆರಿಗೆ ವಿಧಿಸಲಾಗಿದೆ. ಇದರಿಂದ ಸಣ್ಣ ಉದ್ಯಮ, ಕೈಗಾರಿಕೆ, ಗೃಹ ಕೈಗಾರಿಕೆಗಳಿಗೂ ಅನುಕೂಲವಾಗಲಿದೆ. ಆಹಾರ ವಸ್ತುಗಳು, ಔಷಧಿ, ಜೀವವಿಮೆ ಹೀಗೆ ಹಲವು ಕ್ಷೇತ್ರಗಳಲ್ಲಿ ತೆರಿಗೆ ಕಡಿತವಾಗಲಿದೆ. ನಾಳೆಯಿಂದಲೇ ಈ ನಿಯಮ ಜಾರಿಗೆ ಬರಲಿದೆ. ಸಾಬೂನು, ಬ್ರಷ್, ಟೂತ್ ಪೇಸ್ಟ್, ಸೋಪ್, ಹಾಲು, ಮೊಸರು, ಬೆಣ್ಣೆ, ಹಾಲಿನ ಉತ್ಪನ್ನಗಳು, ಹೇರ್ ಆಯಿಲ್, ರೋಟಿ-ಕಾಕ್ರಾ, ಪಿಜ್ಜಾ, ಆಹಾರ ಉತ್ಪನ್ನಗಳು, ಆರೋಗ್ಯ ಹಾಗೂ ಜೀವವಿಮೆ, ಕಾರು, ಬೈಕ್, ಸೈಕಲ್, ಮಕ್ಕಳ ಕಲಿಕಾ ಸಾಮಗ್ರಿಗಳು, ಫ್ರಿಡ್ಜ್, ವಾಷಿಂಗ್ ಮಷಿನ್, ಟಿವಿ, ಸಣ್ಣ ವಾಹನಗಳು, ಕೃಷಿ ಯಂತ್ರಗಳು, ಉಪಕರಣಗಳು ಹೀಗೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಲಿದೆ ಎಂದು ತಿಳಿಸಿದರು.

Home add -Advt


Related Articles

Back to top button