Belagavi NewsBelgaum NewsKannada NewsKarnataka News

ಶ್ರೀರಾಮ ಉತ್ಸವದಲ್ಲಿ ಭಾಗಿಯಾದ ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶ್ರೀರಾಮ ನಮ್ಮೆಲ್ಲರ ಆರಾಧ್ಯ ದೈವ. ರಾಮ ನಮ್ಮೆಲ್ಲರ ಹೃದಯದಲ್ಲಿದ್ದಾನೆ. ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠಾಪನೆ ಹಾಗೂ ಭವ್ಯ ಶ್ರೀರಾಮ ಮಂದಿರದ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ಇಂದು  ಹಮ್ಮಿಕೊಂಡಿರುವ ಈ ಶ್ರೀರಾಮ ಉತ್ಸವದಲ್ಲಿ ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಭಾಗವಹಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ತಾರಿಹಾಳ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀರಾಮ ಉತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾವು ದೈವೀ ಭಕ್ತರು. ರಾಮಮಂದಿರ ಸೇರಿದಂತೆ ನೂರಾರು ಮಂದಿರಗಳಿಗೆ ನಮ್ಮಿಂದಾದ ನೆರವು ನೀಡಿದ್ದೇವೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 110ಕ್ಕೂ ಹೆಚ್ಚು ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ನಿರ್ಮಾಣ ಮಾಡಲು ಸಹಾಯ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ತೆರಳಿ ರಾಮನ ದರ್ಶನ ಮತ್ತು ಆಶಿರ್ವಾದ ಪಡೆಯಲಾಗುವುದು ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದರು. 

ಉತ್ತಮ ರೀತಿಯಲ್ಲಿ ಶ್ರೀರಾಮ ಉತ್ಸವ ಆಯೋಜಿಸಿದ್ದಕ್ಕಾಗಿ ಗ್ರಾಮಸ್ಥರನ್ನು ಅಭಿನಂದಿಸಿದ ಚನ್ನರಾಜ, ಜನರ ಭಾವನೆಗಳ ಜೊತೆಗೆ ನಾವಿದ್ದೇವೆ ಎಂದು ಭರವಸೆ ನೀಡಿದರು.

Home add -Advt

ಈ ಸಮಯದಲ್ಲಿ ಪ್ರಮೋದ್ ಜಾಧವ್, ಗಜಾನನ ನಾಯಿಕ್, ಯಲ್ಲೇಶ್ ಜೋಗನ್ನವರ, ಸಿದ್ದಪ್ಪ ಖನಗಾಂವಕರ್, ಯಲ್ಲಪ್ಪ ಗೌಂಡಾಡಕರ್, ಈರಪ್ಪ ಭೊಮನ್ನವರ್, ಬಸವರಾಜ ತಳವಾರ, ನಾಮದೇವ್ ಜೊಗನ್ನವರ್, ಅಡಿವೆಪ್ಪ ರಾಗಿಪಾಟೀಲ, ಬಸವರಾಜ ವಾಣಿ, ಅಡಿವೆಪ್ಪ ಜೊಗನ್ನವರ್, ಗೀತಾ ತಳವಾರ, ನಾಗಯ್ಯ ಪೂಜಾರ, ಲಕ್ಷ್ಮಣ ಮುಚ್ಚಂಡಿ, ನಾಗಪ್ಪ ತಳವಾರ, ಗುರುಸಿದ್ದಯ್ಯ ಪೂಜಾರ, ಗ್ರಾಮದ ಪ್ರಮುಖರು, ಸಿದ್ದಯ್ಯ ಸ್ವಾಮಿ, ಯಲ್ಲಣ್ಣ ಚಿಕ್ಕಲಕಿ ಇದ್ದರು.

Related Articles

Back to top button