ಲಾಕ್ ಡೌನ್ ಅವಧಿಯಲ್ಲಿ ಪಾಲಿಸಲು ಪ್ರಧಾನಿ ಹೇಳಿದ ಸಪ್ತ ಸೂತ್ರ ಏನು?

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ಮುಂದಿನ ಒಂದು ವಾರಗಳ ಕಾಲ ಕೊರೊನಾ ವಿರುದ್ಧದ ಹೋರಾಟ ಪ್ರಬಲವಾಗಿದೆ. ಈ ಹಿನ್ನೆಲೆಯಲ್ಲಿ ಮೇ 3ರವರೆಗೆ ಲಾಕ್ ಡೌನ್ ಅವಧಿ ವಿಸ್ತರಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ದೇಶವಾಸಿಗಳು ಯಾರು ಯಾರು ಎಲ್ಲೆಲ್ಲಿ ಇದ್ದೀರೋ ಅದೇ ಸ್ಥಳಗಳಲ್ಲಿ ಸುರಕ್ಷಿತರಾಗಿರಿ, ಲಾಕ್ ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಬೇಡಿ. ಏ.20ರವರೆಗೆ ಕೊರೊನಾ ಅವಲೋಕನ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೊರೊನಾ ವಿರುದ್ಧದ ಹೋರಾಟದ ವೇಳೆ ಲಾಕ್ ಡೌನ್ ಅವಧಿಯಲ್ಲಿ ದೇಶವಾಸಿಗಳು ಪಾಲಿಸಬೇಕಾದ ಸಪ್ತ ಸೂತ್ರಗಳನ್ನು ಕೂಡ ಪ್ರಧಾನಿ ಮೋದಿ ತಿಳಿಸಿದ್ದಾರೆ.

* ಮನೆಯಲ್ಲಿರುವ ಹಿರಿಯ ನಾಗರಿಕರ ಬಗ್ಗೆ ಕಾಳಜಿ ಇರಲಿ
* ಸಾಮಾಜಿಕ ಅಂತರ, ಲಾಕ್ ಡೌನ್ ನ ಲಕ್ಷ್ಮಣ ರೇಖೆ ಪಾಲಿಸಬೇಕು
* ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆಯಲ್ಲಿ ಸಿದ್ಧಪಡಿಸಿದ ಮಾಸ್ಕ್ ಬಳಸಿ. ಆರೋಗ್ಯ ಇಲಾಖೆ ಮಾರ್ಗಸೂಚಿ ಪಾಲಿಸಿ.
* ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
* ಆರೋಗ್ಯ, ಶುಚಿತ್ವ ಕಾರ್ಯಕರ್ತರ ಬಗ್ಗೆ ಗೌರವ ಇರಲಿ.
* ಬಡವರು, ನಿರ್ಗತಿಕರಿಗೆ ಸಹಾಯಮಾಡಿ.
* ದೇಶದಲ್ಲಿ ಯಾವ ನೌಕರನನ್ನೂ ಕೆಲಸದಿಂದ ತೆಗೆಯಬೇಡಿ. ನಿಮ್ಮೊಂದಿಗೆ ಕೆಲಸಮಾಡುವವರನ್ನು ಸಹಾನುಭೂತಿಯಿಂದ ನೋಡಿ.

Home add -Advt

ಮೇ 3ರ ವರೆಗೆ ಲಾಕ್ ಡೌನ್ ವಿಸ್ತರಣೆ, ಇನ್ನಷ್ಟು ಕಠಿಣ – ಮೋದಿ ಘೋಷಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button