ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಸೋಂಕು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿದೆ. ಕೊರೊನಾ ಸಂದರ್ಭದಲ್ಲಿ ಅನೇಕ ಸವಾಲುಗಳು ನಮಗೆ ಎದುರಾಗಿದ್ದವು. ಹಲವು ಸಮಸ್ಯೆಗಳನ್ನು ಎದುರಿಸಿದೆವು. ಕೊರೊನಾದ ಪ್ರತಿ ಬಿಕ್ಕಟ್ಟಿನ ನಡುವೆಯೂ ಪಾಠ ಕಲಿತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
2020ರ ಕೊನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಎದುರಿಗೆ ಹಲವು ಸವಾಲುಗಳಿವೆ. ಆತ್ಮ ನಿರ್ಭರ ಭಾರತ ನಮಗೆ ಹೊಸ ಉತ್ಸಾಹ ನೀಡಿದೆ. ಝೀರೋ ಎಫೆಕ್ಟ್, ಝಿರೋ ಡಿಫೆಕ್ಟ್ ಚಿಂತನೆಯೊಂದಿಗೆ ಕೆಲಸ ಮಾಡಲು ಇದು ಸರಿಯಾದ ಸಮಯ. ದೇಶಿಯ ವಸ್ತುಗಳ ಮೇಲೆ ಜನರ ಆಕರ್ಷಣೆ ಹೆಚ್ಚಿದ್ದು, ದೇಶದಲ್ಲಿ ಉತ್ಪಾದಿತ ವಸ್ತುಗಳ ಬಳಕೆಯ ಸಂಕಲ್ಪ ಮಾಡಲು ದೇಶವಾಸಿಗಳಿಗೆ ಕರೆ ನೀಡಿದರು.
ಇದೇ ವೇಳೆ ಮೈಸೂರಿನ ಶ್ರೀರಂಗಪಟ್ಟಣದ ವೀರಭದ್ರ ಸ್ವಾಮಿ ದೇವಸ್ಥಾನದ ಪರಿಸರದಲ್ಲಿ ಗಿಡಗಂಟಿ, ಪೊದೆಗಳು ಬೆಳೆದಿದ್ದವು. ದೇವಾಲಯದ ಆವರಣವನ್ನು ಯುವ ಬ್ರಿಗೇಡ್ ಕಾರ್ಯಕರರು ಸ್ವಚ್ಚಗೊಳಿಸಿದ್ದು, ಯುವ ಸಮೂಹದ ಈ ಕಾರ್ಯಗಳು ದೇಶದ ಜನರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ