ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದ ಕೋಟಿ ಕೋಟಿ ಜನತೆಗೆ ಎಷ್ಟು ಕೃತಜ್ನ ಸಲ್ಲಿಸಿದರೂ ಕಡಿಮೆ ದೇಶಾದ್ಯಂತ ಲಾಕ್ ಡೌನ್ ಗೆ ಜನತೆ ಸಹಕಾರ ನೀಡಿದ್ದಾರೆ. ಬಡವ – ಶ್ರೀಮಂತ, ವಿದ್ಯಾವಂತ – ಅವಿದ್ಯಾವಂತ ಎನ್ನುವ ಯಾವ ಭೇದ – ಭಾವ ಇಲ್ಲದೇ ಎಲ್ಲರೂ ನಿನ್ನೆ ದೀಪ ಬೆಳಗಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈ ಮೂಲಕ 130 ಕೋಟಿ ಜನರು ಸುದೀರ್ಘ ಹೋರಾಟಕ್ಕೆ ಸಿದ್ಧವಾಗಿದ್ದಾರೆ. ಕೊರೊನಾ ವಿರುದ್ಧ ಹೋರಾಟ ನಡೆಸುವುದು ಎಲ್ಲರ ಏಕೈಕ ಸಂಕಲ್ಪವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕೊರೊನಾ ಭೀತಿ ನಡುವೆಯೂ ಬಿಜೆಪಿ 40ನೇ ಸಂಸ್ಥಾಪನಾ ದಿನ ಹಿನ್ನಲೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜನತಾ ಕರ್ಫ್ಯೂ, ಲಾಕ್ ಡೌನ್ ಗೆ ದೊಡ್ಡ ಬೆಂಬಲ ನೀಡಿದ್ದಾರೆ. ದೇಶಾದ್ಯಂತ ಜನರು ಸಾಮೂಹಿಕ ಶಕ್ತಿ ಪ್ರದರ್ಶಿಸಿದ್ದಾರೆ. ಇಡೀ ದೇಶ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದೆ ಎಂದರು.
ಇದೇ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ 5 ಕೆಲಸಗಳನ್ನು ಮಾಡುವಂತೆ ಕರೆ ನೀಡಿದ್ದಾರೆ.
* ಯಾವುದೇ ಬಡವರು ಹಸಿದುಕೊಂಡು ಇರಬಾರದು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಿರಂತರವಾಗಿ ಬಡವರಿಗೆ ಪಡಿತರ ವಿತರಣೆ ಮಾಡಬೇಕು. ಅಗತ್ಯ ಎನಿಸಿದಲ್ಲಿ ಇತರೇ ಸಂಘ ಸಂಸ್ಥೆಗಳ ಜೊತೆ ಸೇರಿ ಸಹಾಯ ಮಾಡಬೇಕು.
* ಕೊರೊನಾ ಎನ್ನುವ ಸಾಂಕ್ರಾಮಿಕ ಖಾಯಿಲೆಯಿಂದ ಪಾರಾಗಲು ಮಾಸ್ಕ್ ಅವಶ್ಯಕವಾಗಿದ್ದು, ಒಬ್ಬ ಕಾರ್ಯಕರ್ತ ಐದು ಜನರಿಗೆ ಮಾಸ್ಕ್ ನೀಡಬೇಕು. ಕುಟುಂಬಸ್ಥರು ಗೆಳೆಯರಿಗೆ ವಿತರಣೆ ನೀಡಬೇಕು.
* ಬಿಜೆಪಿ ಕಾರ್ಯಕರ್ತರು ತಮ್ಮ ಮತ ಕ್ಷೇತದಲ್ಲಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರು, ನರ್ಸ್, ಪೊಲೀಸ್, ಪೌರ ಕಾರ್ಮಿಕರು ಸೇರಿ ತುರ್ತು ಸೇವೆಯಲ್ಲಿರರುವರಿಗೆ ಧನ್ಯವಾದ ಪತ್ರ ಬರೆದು ಕೃತಜ್ಞತೆ ಸಲ್ಲಿಸಬೇಕು.
* ಕೊರೊನಾ ವೈರಸ್ ಬಗ್ಗೆ ಕಾರ್ಯಕರ್ತರು ಜಾಗೃತಿ ಮೂಡಿಸಬೇಕು. ಒಬ್ಬ ಕಾರ್ಯಕರ್ತ ಆರೋಗ್ಯ ಸೇತು ಆ್ಯಪ್‍ನ್ನು 40 ಜನರ ಮೊಬೈಲ್ ನಲ್ಲಿ ಇನ್ ಸ್ಟಾಲ್ ಮಾಡಿಸಬೇಕು. ಕೊರೊನಾ ವಿರುದ್ಧ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು.
* ಕೊರೊನಾ ಸಂಕಷ್ಟ ವಿರುದ್ಧ ಹೋರಾಟ ನಡೆಸಲು ಆರ್ಥಿಕವಾಗಿಯೂ ನಾವು ಬಲಿಷ್ಠವಾಗಬೇಕು. ಬಿಜೆಪಿಯ ಒಬ್ಬ ಕಾರ್ಯಕರ್ತ 40 ಜನರಿಂದ ಪಿಎಂ ಕೇರ್ಸ್ ನಿಧಿಗೆ ಧನ ಸಹಾಯ ಮಾಡಿಸಲು ಪ್ರೇರೇಪಿಸಬೇಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ