Kannada NewsKarnataka NewsLatest
ನ್ಯಾಯಾಧೀಶರ ಕ್ವಾರ್ಟರ್ಸ್ ನಿಂದ ಐಷು ನಾಪತ್ತೆ

ನ್ಯಾಯಾಧೀಶರ ಕ್ವಾರ್ಟರ್ಸ್ ನಿಂದ ನಾಯಿ ನಾಪತ್ತೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಇಲ್ಲಿಯ ಕನ್ನಡ ಸಾಹಿತ್ಯಭವನದ ಹಿಂಭಾಗದಲ್ಲಿರುವ ನ್ಯಾಯಾಧೀಶರ ಕ್ವಾರ್ಟರ್ಸ್ ನಿಂದ ಐಷು ಹೆಸರಿನ ನಾಯಿಯೊಂದು ನಾಪತ್ತೆಯಾಗಿದೆ.
ಗೋಲ್ಡನ್ ರಿಟರಿವರ್ ಜಾತಿಯ ಸುಮಾರು 3-4 ವರ್ಷದ ಹೆಣ್ಣು ನಾಯಿ 28ರಂದೆ ಸಂಜೆ 6 ಗಂಟೆ ಸುಮಾರಿಗೆ ವಾಯುವಿಹಾರಕ್ಕೆ ಕರೆದೊಯ್ದ ಸಂದರ್ಭದಲ್ಲಿ ತಪ್ಪಿಸಿಕೊಂಡಿದೆ. ಈ ಸಂಬಂಧ ವೇದಾವತಿ ಕೃಷ್ಣಪ್ಪ ಎನ್ನುವವರು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಾಯುವಿಹಾರಕ್ಕೆ ಕರೆದೊಯ್ದಾಗ ಐಷು ತಪ್ಪಿಸಿಕೊಂಡಿದೆ. ನಾಯಿಯ ಮೌಲ್ಯ 60 ಸಾವಿರ ರೂ. ಇದ್ದು, ಅದನ್ನು ಪತ್ತೆ ಮಾಡಿ ನಮ್ಮ ಸುಪರ್ಧಿಗೆ ಕೊಡುವಂತೆ ಅವರು ಕೋರಿದ್ದಾರೆ.
ನಾಯಿ ತಪ್ಪಿಸಿಕೊಂಡಾಗ ಅಕ್ಕಪಕ್ಕದಲ್ಲೆಲ್ಲ ವಿಚಾರಿಸಿದ್ದೇವೆ. ಕನ್ನಡ ಸಾಹಿತ್ಯ ಭವನದ ಆವರಣದಲ್ಲಿರುವ ಪುಸ್ತಕದ ಅಂಗಡಿಯಲ್ಲಿ ವಿಚಾರಿಸಿದಾಗ, ವ್ಯಕ್ತಿಯೋರ್ವ ನಾಯಿಯನ್ನು ಮಾತನಾಡಿಸುತ್ತ ಸ್ಕೂಟಿಯಲ್ಲಿ ಕರೆದೊಯ್ದಿದ್ದಾನೆ ಎನ್ನುವ ಮಾಹಿತಿ ಸಿಕ್ಕಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


