Latest

ಕೊವ್ಯಾಕ್ಸಿನ್ ಲಸಿಕೆ ಪಡೆದ ಪ್ರಧಾನಿ ಮೋದಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಅವರು ಕೊರೊನಾ ಲಸಿಕೆಯ ಮೊದಲ ಡೋಸ್‌ ಪಡೆಯುವ ಮೂಲಕ ದೇಶದ ಜನತೆಗೆ ಮಾದರಿಯಾಗಿದ್ದಾರೆ.

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್)ನಲ್ಲಿ ಪ್ರಧಾನಿ ಮೋದಿ ಕೊರೊನಾ ಲಸಿಕೆಯ ಪಡೆದುಕೊಂಡರು. ಪುದಚೇರಿ ಮೂಲದ ನರ್ಸ್‌ ನಿವೇದಾ ಪ್ರಧಾನಿ ಮೋದಿಯವರಿಗೆ ಕೊವ್ಯಾಕ್ಸಿನ್‌ ಕೊರೊನಾ ಲಸಿಕೆಯ ಮೊದಲ ಡೋಸ್‌ನ್ನು ನೀಡಿದರು.

Home add -Advt

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಏಮ್ಸ್ ನಲ್ಲಿ ನಾನು ಕೋವಿಡ್ ಲಸಿಕೆಯನ್ನು ತೆಗೆದುಕೊಂಡಿದ್ದೇನೆ. ಲಸಿಕೆಯನ್ನು ತೆಗೆದುಕೊಳ್ಳಲು ಅರ್ಹರಾದ ಎಲ್ಲರಿಗೂ ನಾನು ಮನವಿ ಮಾಡುತ್ತಿದ್ದೇನೆ. ಒಟ್ಟಾಗಿ, ಭಾರತವನ್ನು ಕೋವಿಡ್-19 ಮುಕ್ತವನ್ನಾಗಿ ಮಾಡೋಣ ಎಂದು ಕರೆ ನೀಡಿದ್ದಾರೆ.

Related Articles

Back to top button