Latest

ಸಚಿವ ಶ್ರೀರಾಮುಲು ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಸಚಿವ ಶ್ರೀರಾಮುಲು ವಿರುದ್ಧ ಮಾಜಿ ಸಂಸದ, ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ದೋಷಾರೋಪ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿ.ಎಸ್.ಉಗ್ರಪ್ಪ, ಶ್ರೀರಾಮುಲು ವಿರುದ್ಧ ಜಮೀನು ಕಬಳಿಕೆ ಆರೋಪ ಕೇಇಬಂದಿದೆ. ಪ್ರಕರಣದಲ್ಲಿ ಸಚಿವರುಇ A6 ಆರೋಪಿಯಾಗಿದ್ದಾರೆ. ಮಾರ್ಚ್ ನಲ್ಲಿ ಸಚಿವರ ವಿರುದ್ಧ ಬಳ್ಳಾರಿ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ ಎಂದು ಹೇಳಿದರು. ಇದೇ ವೇಳೆ ಸಚಿವ ಶ್ರೀರಾಮುಲು ವಿರುದ್ಧ 6 ಸಾವಿರ ಪುಟಗಳ ದೋಷಾರೋಪ ಪಟ್ಟಿ ಬಿಡುಗಡೆ ಮಾಡಿದ್ದಾರೆ.

Related Articles

ಶ್ರೀರಾಮುಲು ವಾಲ್ಮೀಕಿ ಸಮಾಜಕ್ಕೆ ಕೆಟ್ಟ ಹೆಸರು ತಂದಿದ್ದಾರೆ. ಕಾಂಗ್ರೆಸ್ ಬಗ್ಗೆ ಮಾತನಾಡುವ ಶ್ರೀರಾಮುಲು ಸತ್ಯ ಹರಿಶ್ಚಂದ್ರರಲ್ಲ. ಈ ಬಗ್ಗೆ ರಾಜ್ಯಪಾಲರಿಗೂ ದೂರು ನೀಡುತ್ತೇವೆ. ಜನತಾ ನ್ಯಾಯಾಲಯದ ಮುಂದೆ ಇ ಪ್ರಕರಣ ತೆಗೆದುಕೊಂಡು ಹೋಗುತ್ತೇವೆ ಎಂದು ಕಿಡಿಕಾರಿದ್ದಾರೆ.

ಸಚಿವರಿಗೆ ಕಾನೂನು ಮೇಲೆ ಗೌರವ ಇದ್ದರೆ ಮೊದಲು ರಾಜೀನಾಮೆ ಕೊಡಲಿ. ಇಲ್ಲವೇ ಸಿಎಂ ಬೊಮ್ಮಾಯಿಯವರು ಸಚಿವರನ್ನು ವಜಾಗೊಳಿಸಲಿ ಎಂದು ಆಗ್ರಹಿಸಿದರು.

Home add -Advt

ಮಳಲಿ ಮಸೀದಿ ವಿವಾದ ಮತ್ತೆ ತೀರ್ಪು ಕಾಯ್ದಿರಿಸಿದ ಕೋರ್ಟ್

https://pragati.taskdun.com/latest/malali-masjid-casemangalore-courtjudgement-postpone/

Related Articles

Back to top button