ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಆಧುನಿಕರಣಗೊಂದ ನಾರಾಯಣಪುರ ಎಡದಂಡೆ ಕಾಲುವೆ, ಬಹುಗ್ರಾಮ ಕುಡಿಯುವ ನೀರು ಯೋಜನೆ, ಸೂರತ್-ಚೆನ್ನೈ ಹೆದ್ದಾರಿ ಶಿಲನ್ಯಾಸ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಡಿದ ಪ್ರಧಾನಿ ಮೋದಿ, ಸಮಾವೇಶದಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ನನ್ನ ದೃಷ್ಟಿ ಎಷ್ಟು ದೂರ ಹೋಗಬಹುದೋ ಅಷ್ಟು ದೂರಕ್ಕೆ ಜನರೇ ಕಂಡುಬರುತ್ತಿದ್ದಾರೆ. ಹೆಲಿ ಪ್ಯಾಡ್ ನಲ್ಲಿಯೂ ಜನವೋ ಜನ. ಇಲ್ಲಿಯೂ ಜನವೋ ಜನ. ಪೆಂಡಾಲ್ ಹೊರಗೂ ಸಾವಿರಾರು ಜನ ಬಿಸಿಲಿನಲ್ಲಿಯೇ ನಿಂತಿದ್ದಾರೆ. ನಿಮ್ಮ ಪ್ರೀತಿ, ಆಶಿರ್ವಾದವೇ ನಮಗೆ ಶಕ್ತಿ ಎಂದು ಹೇಳಿದರು.
ಯಾದಗಿರಿ ಸಮೃದ್ಧ ಇತಿಹಾಸವನ್ನು ಹೊಂದಿದೆ. ರಟ್ಟಿಹಳ್ಳಿಯ ಸ್ಮಾರಕದ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಮ್ಮ ಸಂಸ್ಕೃತಿಯ ಭಾಗವಾಗಿರುವ ಹಲವು ಅಂಶಗಳು ಇಲ್ಲಿವೆ. ಸುರಪುರದ ಹೋರಾಟಗಾರರು, ಮಹಾನ್ ರಾಜಾ ವೆಂಕಟಪ್ಪನಾಯಕ ಸ್ವರಾಜ್ಯದ ಹೋರಾಟದಲ್ಲಿ ಖ್ಯಾತಿ ಪಡೆದವರು ಎಂದು ಸುರಪುರದ ಇತಿಹಾಸ ಸ್ಮರಿಸಿದರು. ಯಾದಗಿರಿಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
*ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
https://pragati.taskdun.com/chikkamagaluru-habbacm-basavaraj-bommaimobile-clinic/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ