Belagavi NewsBelgaum NewsCrimeKannada NewsKarnataka News

*ಬೃಹತ್ ಕಳ್ಳಭಟ್ಟಿ ಜಾಲ ಭೇಧಿಸಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಜಿಲ್ಲಾ ಪೊಲೀಸರು ಅಪಾರ ಪ್ರಮಾಣದ ಕಳ್ಳಭಟ್ಟಿ ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊರಬ ಗ್ರಾಮದಲ್ಲಿ ಭರ್ಜರಿ ಕಾರ್ಯಾಚರಣೆ ನಡೆದಿದೆ. ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬೃಹತ್ ಪ್ರಮಾಣದ ಕಳ್ಳಭಟ್ಟಿ ಮತ್ತು ಕಚ್ಚಾ ವಸ್ತುಗಳು ಸಹ ಜಪ್ತಿ ಮಾಡಲಾಗಿದೆ.

Home add -Advt

ಕುಡಚಿ ಪೊಲೀಸ್ ಠಾಣೆಯ ಸಿಬ್ಬಂದಿ  ದಾಳಿ ವೇಳೆ ಆರೋಪಿಯ ಮನೆಯಲ್ಲಿ ಸಂಗ್ರಹಿಸಿದ ಕೊಳೆ 1790 ಲೀಟರ್ ಮತ್ತು ಕಳ್ಳಭಟ್ಟಿ ಸಾರಾಯಿ, 10 ಲೀಟ‌ರ್ ಕಳ್ಳಭಟ್ಟಿ ಹಾಗೂ ಕಳ್ಳಭಟ್ಟಿ ತಯಾರು ಮಾಡಲು ಉಪಯೋಗಿಸುತ್ತಿದ್ದು ಬ್ಯಾರಲ್ ಗಳನ್ನು ಜಪ್ತ ಮಾಡಲಾಗಿದೆ.

ಜಿಲ್ಲೆಯಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು, ರೌಡಿಸಂ ಅಥವಾ ಸಾರ್ವಜನಿಕರಿಗೆ ಭಯ ಹುಟ್ಟಿಸುವಂತಹ ಕೃತ್ಯಗಳಲ್ಲಿ ತೊಡಗಿದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾನ್ಯ ಪೊಲೀಸ್ ಅಧೀಕ್ಷಕರು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.

Related Articles

Back to top button