
ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಕೃತ್ಯಗಳು ನಡೆದ ಸಂದರ್ಭದಲ್ಲಿ ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ ನಡೆಸಿ ಅಪರಾಧಿಗಳನ್ನು ಬಂಧಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತರ ನೂತನ ಕಚೇರಿಯ ಕಟ್ಟಡವನ್ನು ಬುಧವಾರ(ಡಿ.28) ಉದ್ಘಾಟಸಿ ಅವರು ಮಾತನಾಡಿದರು.
ಬೆಳಗಾವಿ ಸೇರಿದಂತೆ ಎಲ್ಲಾ ಜಿಲ್ಲೆಗಳ ಪೊಲೀಸರು ಜನರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಳ್ಳಬೇಕು. ಪೊಲೀಸ್ ಇಲಾಖೆ ಜನರ ಸಹಕಾರದಿಂದ ಶಾಂತಿ ಸುವ್ಯವಸ್ಥಿತ ಕಾಪಾಡಬೇಕು. ಪೊಲೀಸರಿಗೆ ಗಡಿ ಭಾಗದ ಸವಾಲುಗಳು ಭಿನ್ನವಾಗಿವೆಎಂದರು.

*2500 ಪೊಲೀಸ್ ವಸತಿ ಗೃಹಗಳ ನಿರ್ಮಾಣ*
ರಾಜ್ಯ ಪೊಲೀಸ್ ವಸತಿ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ ಈ ವರ್ಷವೇ 2500 ಮನೆಗಳು ನಿರ್ಮಾಣವನ್ನು ಪೂರ್ಣಗೊಳಿಸಲಾಗುವುದು. ಸರ್ಕಾರದ ವತಿಯಿಂದ ಒಂದು 116 ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ.
ಎಲ್ಲಾ ಪೊಲೀಸ್ ಠಾಣೆಗಳು ಉದ್ಘಾಟನೆ ಹಂತದಲ್ಲಿ. ಪೊಲೀಸ್ ಸಾರಿಗೆ ವ್ಯವಸ್ಥೆ ಬಲಪಡಿಸಲು ರೂ.80 ಕೋಟಿಗಳನ್ನು ನೀಡಲಾಗಿದೆ. 300ಕ್ಕೂ ಅಧಿಕ ಜೀಪ್ ಸ್ಕಾರ್ಪಿಯೋ, ಬುಲೇರೋಗಳನ್ನು ಖರೀದಿ ಮಾಡಲಾಗಿದೆ.
ವಿವಿಧ ಹಂತದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೂ ವಾಹನಗಳನ್ನು ಒದಗಿಸಲು ಸರ್ಕಾರ ಆದೇಶ ಹೊರಡಿಸಿದೆ. ಡಿ.ವೈ.ಎಸ್ ಪಿ ಹಂತದ ಅಧಿಕಾರಿಗಳಿಗೆ ಸ್ಕಾರ್ಪಿಯೋ ವಾಹನ ನೀಡಲಾಗುವುದು. ರಾಜ್ಯ ಪೊಲೀಸ್ ವಸತಿ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ದಕ್ಷತೆ ಯಿಂದ ಕೆಲಸ ಮಾಡುತ್ತಿದೆ ಎಂದರು.
ನಾನು ಗೃಹ ಮಂತ್ರಿಯಾಗಿದ್ದಾಗ ಆರಂಭವಾಗಿದ್ದ ಕಟ್ಟಡಗಳು ಒಂದು ವರ್ಷದಲ್ಲಿ ಪೂರ್ಣಗೊಂಡಿವೆ. ಇವನ್ನು ಮುಖ್ಯಮಂತ್ರಿಯಾದ ಬಳಿಕ ಉದ್ಘಾಟಿಸಿದ್ದೇನೆ.
ನಿಗಮದ ವತಿಯಿಂದ ರಾಜ್ಯದಲ್ಲಿ ಎರಡು ಬಂಧಿಖಾನೆಗಳನ್ನು ನಿರ್ಮಾಣ ಮಾಡಲಾಗುವುದು. ವಿಧಿ ವಿಜ್ಞಾನ ಪ್ರಯೋಗಾಲಯಲನ್ನ ಸ್ಥಾಪಿಸಲಾಗಿದೆ. ಅಗತ್ಯ ತಜ್ಞರ ನೇಮಕಾತಿ ಮಾಡಲಾಗಿದೆ.
ಹಿಂದೆ ವಿಧಿ ವಿಜ್ಞಾನ ವರದಿಗಳು ಕೈಸೇರಲು ಮೂರು ತಿಂಗಳು ಹಿಡಿಯುತ್ತಿತ್ತು. ಸದ್ಯ 30 ದಿನಗಳ ವರದಿಗಳನ್ನು ನೀಡಲಾಗುತ್ತಿದೆ. 15 ದಿನದಲ್ಲಿ ವಿಧಿ ವಿಜ್ಞಾನ ವರದಿ ನೀಡಲು ಕ್ರಮ ವಹಿಸುವುದಾಗಿ ಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ ಪೊಲೀಸರು ಗಡಿ ವಿಚಾರದಂತಹ ಭಾವನಾತ್ಮಕ ವಿಚಾರಗಳಲ್ಲಿ ಸಹನೆಯಿಂದ ಕಾರ್ಯ ನಿರ್ವಹಿಸಿದ್ದರೆ.
ಪೊಲೀಸ್ ಇಲಾಖೆ ಗೃಹ ನಿರ್ಮಾಣದ ಜೊತೆಗೆ ನೂತನ ಪೊಲೀಸ್ ಠಾಣೆ, ಎಫ್‌ಎಸ್‌ಎಲ್ ಲ್ಯಾಬ್ ನಿರ್ಮಾಣ, ವಾಹನ ಹಾಗೂ ನೂತನ ಶಸ್ತ್ರಾಸ್ತ್ರ ಖರೀದಿಸಲು ಮುಖ್ಯಮಂತ್ರಿಗಳು ಅಗತ್ಯ ಅನುದಾನ ನೀಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ್ ಎಸ್. ಬೆನಕೆ ಬೆಳಗಾವಿ ಪೊಲೀಸರ ಬಗ್ಗೆ ಅಪಾರ ಪ್ರೀತಿಯಿದೆ. ಕರೋನಾ ಕಾಲದಲ್ಲಿ ಪೊಲೀಸರು ಕೊರೋನಾ ಎದುರಿಸಿ ಜನರ ಸೇವೆ ಮಾಡಿದ್ದಾರೆ. ಬೆಳಗಾವಿ ನಗರದ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಿದ್ದಾರೆ.
ಬ್ರಿಟಿಷ್ ಕಾಲೋನಿಯಲ್ಲಿ ಪೊಲೀಸರಿಗೆ ಗೃಹಗಳನ್ನು ನಿರ್ಮಿಸಬೇಕು. ಬಂದೊಬಸ್ತ್ ಗೆ ಆಗಮಿಸುವ ಪೊಲೀಸರಿಗೆ ನಗರದಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದೆ ಮಂಗಲ ಸುರೇಶ ಅಂಗಡಿ ಶಾಸಕ ಮಹೇಶ ಕುಮಠಳ್ಳಿ, ಒಳಾಡಳಿತ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲ್, ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕ ಪ್ರವೀಣ ಸೂದ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ನಿಗಮ ವ್ಯವಸ್ಥಾಪಕ ನಿರ್ದೇಶಕರು ಅರುಣ ಜೆ. ಚಕ್ರವರ್ತಿ, ಬೆಳಗಾವಿ ಪ್ರಾದೇಶಿಕ ಆಯುಕ್ತ ಎಂ. ಜಿ. ಹಿರೇಮಠ, ಉತ್ತರ ಬೆಳಗಾವಿ ಆರಕ್ಷಕ ಮಹಾನಿರೀಕ್ಷಕ ಎನ್. ಸತೀಶ್ ಕುಮಾರ್, ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ, ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಂಜೀವ ಎಂ. ಪಾಟೀಲ್, ಉಪ ಪೊಲೀಸ್ ಆಯುಕ್ತರಾದ ರವೀಂದ್ರ ಕೆ. ಗಡಾದಿ, ಸ್ನೇಹ .ಪಿ. ವಿ, ಸಿದ್ದನಗೌಡ ವೈ. ಪಾಟೀಲ ಸೇರಿದಂತೆ ಮತ್ತಿತರರು ಇದ್ದರು.
https://pragati.taskdun.com/3-studentssuicideuttar-pradeshlove-failure/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ