Kannada NewsKarnataka NewsLatest

ಮದುವೆಗೆ 5 ದಿನ ಇರುವಾಗ ಪೊಲೀಸ್ ಪೇದೆ ಅಪಘಾತಕ್ಕೆ ಬಲಿ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಮದುವೆಗೆ ಕೇವಲ 5 ದಿನ ಬಾಕಿ ಇರುವಾಗ 25 ವರ್ಷದ ಪೊಲೀಸ್ ಪೇದೆ ಅಪಘಾತಕ್ಕೆ ಬಲಿಯಾಗಿದ್ದಾರೆ.

ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಬಳಿ ಗುರುವಾರ ರಾತ್ರಿ ಘಟನೆ ನಡೆದಿದ್ದು, ಗೋಕಾಕ ತಾಲೂಕು ಪಾಮಲದಿನ್ನಿಯ ರಮೇಶ ನಾಯಿಕ ಮೃತನಾದ ಪೊಲೀಸ್. ಮೆ 19ರಂದು ಇವರ ವಿವಾಹ ನಡೆಯಬೇಕಿತ್ತು.

ಕರ್ತವ್ಯ ಮುಗಿಸಿ ಮನೆಗೆ ತೆರಳುವಗ ನಿಪ್ಪಾಣಿ -ಮುಧೋಳ ರಾಜ್ಯ ಹೆದ್ದಾರಿಯ ನಾಗಮುನೋಳಿ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ರಮೇಶ್ ನಿಧನರಾದರು.

ರಮೇಶ ಪೊಲೀಸ್ ಕೆಲಸಕ್ಕೆ ಸೇರಿ 2 ವರ್ಷವಾಗಿತ್ತು. ಕೆಲವು ತಿಂಗಳ ಹಿಂದೆ ಚಿಕ್ಕೋಡಿ ಠಾಣೆಗೆೆ ವರ್ಗವಾಗಿ ಬಂದಿದ್ದರು.

Home add -Advt

ಕಳೆದ ವಾರ ಸವದತ್ತಿಯಲ್ಲೂ ಪೊಲೀಸ್ ಒಬ್ಬರು ಕರ್ತವ್ಯದಲ್ಲಿರುವಾಗಲೇ ಸಾವಿಗೀಡಾಗಿದ್ದರು. ಕಳೆದ ತಿಂಗಳ ಹಿಂದೆ ಬೆಳಗಾವಿಯಲ್ಲಿ ಒಪ್ಪ ಪೊಲೀಸ್ ಪೇದೆ ಅಪಘಾತಕ್ಕೆ ಬಲಿಯಾಗಿದ್ದರು.

ಮೂವರೂ ಕೊರೋನಾ ಕರ್ತವ್ಯದ ಮೇಲಿದ್ದರು ಎನ್ನುವುದು ವಿಶೇಷ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button