Wanted Tailor2
Cancer Hospital 2
Bottom Add. 3

*ತನ್ನದೇ ಮಗುವನ್ನು ನೆಲಕ್ಕೆಸೆದು ಕೊಂದ ಪೊಲೀಸ್ ಕಾನ್ಸ್ ಟೇಬಲ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಾಲ್ಕು ತಿಂಗಳ ಮಗುವನ್ನು ಪೊಲೀಸ್ ಕಾನ್ಸ್ ಟೇಬಲ್ ನೆಲಕ್ಕೆಸೆದು ಕೊಂದ ಘೋರ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ.

ಬಸಪ್ಪ ಬಾಳುಬಂಕಿ ತನ್ನದೇ ಮಗುವನ್ನು ಕೊಲೆಗೈದ ಪೊಲೀಸ್ ಕಾನ್ಸ್ ಟೇಬಲ್. ಬಸಪ್ಪ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಕಾನ್ಸ್ ಟೇಬಲ್ ಆಗಿದ್ದು, ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೂಲತ: ಗೋಕಾಕ ತಾಲೂಕಿನ ದುರುದುಂಡಿ ಗ್ರಾಮದವರು.

ಬಸಪ್ಪ ಬಾಳುಬಂಕಿ ಚಿಂಚಲಿ ಗ್ರಾಮದ ಲಕ್ಷ್ಮೀ ಎಂಬುವವರನ್ನು ವಿವಾಹವಾಗಿದ್ದರು. ಹೆರಿಗೆಗಾಗಿ ಪತ್ನಿ ಲಕ್ಷ್ಮೀ ತವರಿಗೆ ಬಂದಿದ್ದು ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸೆ.18ರಂದು ಚಿಂಚುಲಿ ಗ್ರಾಮಕ್ಕೆ ಬಂದ ಬಸಪ್ಪ ಮಗುವನ್ನು ದುರದುಂಡಿಯ ಜಾತ್ರೆಗೆ ಕರೆದೊಯ್ಯುವುದಾಗಿ ಹೇಳಿದ್ದಾನೆ. ಇದಕ್ಕೆ ಪತ್ನಿ ಬೇಡವೆಂದು ಹೇಳಿದ್ದಾಳೆ. ಆದರೂ ಕೇಳದೇ ಮಗುವನ್ನು ಬೈಕ್ ನಲ್ಲಿ ಕರೆದೊಯಲು ಮುಂದಾಗಿದ್ದಾನೆ. ಈ ವೇಳೆ ಪತ್ನಿ ನಾಲ್ಕು ತಿಂಗಳ ಮಗುವನ್ನು ಬೈಕ್ ನಲ್ಲಿ ಕರೆದೊಯ್ಯುವುದು ಬೇಡ ಎಂದು ತಡೆದಿದ್ದಾಳೆ.

ಇಬ್ಬರ ನಡುವೆ ಗಲಾಟೆಯಾಗಿದ್ದು, ಕೋಪದ ಬರದಲ್ಲಿ ಬಸಪ್ಪ, ಮಗುವನ್ನು ಎತ್ತಿ ನೆಲಕ್ಕೆಸೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

ಘಟನೆ ಬಳಿಕ ಆರೋಪಿ ಬಸಪ್ಪ ಬಾಳುಬಂಕಿ ನಾಪತ್ತೆಯಾಗಿದ್ದ. ಪತ್ನಿ ನೀಡಿದ ದೂರಿನ ಮೇರೆಗೆ ಕುಡುಚಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ ಬಸಪ್ಪ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ಕೂಡ ದಾಖಲಾಗಿದೆ.


Bottom Add3
Bottom Ad 2

You cannot copy content of this page