ಭರ್ಜರಿ ಬೇಟೆ ಆಡಿದ ಪೋಲೀಸರು
ಪ್ರಗತಿವಾಹಿನಿ ಸುದ್ದಿ, ಅಗಸಗಿ (ಬೆಳಗಾವಿ )
ಬೆಳಗಾವಿ ಸಿಸಿಬಿ ಮತ್ತು ಕಾಕತಿ ಪೊಲೀಸರು ಮಟಕಾ ಬುಕ್ಕಿಗಳನ್ನು ಬಂಧಿಸಿದ್ದಾರೆ.
ಕಾಕತಿಯ ಲಕ್ಷ್ಮೀ ಗಲ್ಲಿಯಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಕಳೆದ ಮೂರು ದಿನಗಳಿಂದ ಮಟಕಾದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸರು ಇಂದು ಮಧ್ಯಾಹ್ನ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಕತಿ ಪೋಲಿಸರು ಗಣೇಶ ಹಬ್ಬದ ಬಂದೋಬಸ್ತಿನಲ್ಲಿ ಮಗ್ನರಾಗಿದ್ದನ್ನು ಕಂಡು ಗಲ್ಲಿಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿದ್ದಂತೆ ಮಟಕಾ ದಂಧೆ ನಡೆಸುತ್ತಿದ್ದ ಬುಕ್ಕಿಯನ್ನು ಖಚಿತ ಮಾಹಿತಿ ಪಡೆದು ಕಾಕತಿ ಮತ್ತು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದಿದ್ದಾರೆ.
ಹದಿನೈದು ದಿನಗಳ ಹಿಂದೆ ಕೆಲವರು ಮಟಕಾ ದಂಧೆ ಆರಂಭಿಸಿ ಪೊಲೀಸರ ಅತಿಥಿಯಾಗಿದ್ದರು. ಆದರೆ ಚಾಳಿ ಬಿಡದ ಇವರು ಮತ್ತೆ ದಂಧೆಯನ್ನು ಮುಂದುವರೆಸಿದ್ದರು.
ಕಾಕತಿ ಪಿಐ ಶ್ರೀಶೈಲ ಕೌಜಲಗಿ ಮತ್ತು ಸಿಸಿಬಿ ಇನ್ಸ್ಪೆಕ್ಟರ್ ಗುರುರಾಜ ಕಲ್ಯಾಣ ಶೆಟ್ಟಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಂತೋಷ ಚೆನ್ನಣ್ಣವರ, ಶ್ರೀಕಾಂತ ಉಪ್ಪಾರಟ್ಟಿ , ಮಾನಗಾಂವಿ ಮೊದಲಾದವರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ