Belagavi NewsBelgaum NewsKarnataka NewsLatest

*ಗಣೇಶ ವಿಸರ್ಜನೆಗೆ ಪೊಲೀಸರ ಹೋಸ ರೂಲ್ಸ್: ಶಾಸಕ ಅಭಯ ಪಾಟೀಲ್ ಗರಂ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ವಿಸರ್ಜನೆ ನಡೆಯಲಿದ್ದು, ನಗರ ಪೊಲೀಸರು ಮಾಡಿರುವ ಹೋಸ ರೂಲ್ಸ್ ಗೆ ಬಿಜೆಪಿ ಶಾಸಕ ಅಭಯ ಪಾಟೀಲ್ ಅವರು ಕೆರಳಿದ್ದಾರೆ.

ಇಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಣೇಶ ವಿಸರ್ಜನೆ ಮೆರವಣಿಗೆಯ ಸಮಯದಲ್ಲಿ ಪೊಲೀಸ್‌ ಇಲಾಖೆ ಹಾಕಿರುವ ಹೊಸ ಷರತ್ತುಗಳ ಬಗ್ಗೆ ಗಣೇಶ ಮಂಡಳಗಳ ಪದಾಧಿಕಾರಿಗಳ ಭಾವನೆಗಳನ್ನು ಕಮೀಷನ‌ರ್ ಅವರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದರು

ಮುಂದುವರೆದು ಮಾತನಾಡಿದ ಅವರು, ಈ ಹಿಂದೆ ಅಧಿಕಾರಿಗಳ ಹಾಗೂ ಗಣೇಶೋತ್ಸವ ಮಂಡಳಗಳ ಪದಾಧಿಕಾರಿಗಳ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಹೊಸ ಹೊಸ ಖಂಡೀಷನ್ ಗಳನ್ನು ಹಾಕಲಾಗಿದೆ. ಬೆಳಗಾವಿಯಲ್ಲಿ ಈ ತರ ಹೊಸ ಖಂಡೀಷನ್ ಗಳು ಬೇಡ. 40 ಗಣೇಶ ಮಂಡಳಗಳ ಮಾರ್ಗ ಬದಲಾವಣೆ, ಪಟಾಕಿ ಹಾರಿಸಬೇಡಿ, ಹಾರಿಸಿದರೆ ಕೇಸ್ ಹಾಕುತ್ತೇವೆ. ವಾಧ್ಯಮೇಳಗಳು ಬ್ಯಾಂಕ್ ಆಫ್ ಇಂಡಿಯಾತನಕ ತಂದು ಅಲ್ಲಿಂದ ನಡೆದುಕೊಂಡು ಹೋಗಬೇಕು ಎನ್ನುವ ರಿಸ್ಟ್ರಿಕ್ಷನ್ ಹಾಕಲಾಗಿದೆ ಎಂದು ಆಕ್ರೋಶ ಹೊರ ಹಾಕಿದ್ರು.‌

ಯಾವುದೇ ಘಟನೆಗಳು ಸಂಭವಿಸಿದರೆ ನೀವೆ ಹೊಣೆಗಾರರು ಎಂದು ಖಾಲಿ ಬಾಂಡ್ ಪೇಪರ್ ಮೇಲೆ ಬರೆಸಿದ್ದಾರೆ. ಇತ್ತೀಚೆಗೆ ಒಂದು ಸಭೆ ನಡೆಯಿತು ನಿಮ್ಮಗೆ ಈ ಎಲ್ಲಾ ಖಂಡಿಶೇನ್ ಒಪ್ಪಿಗೆಯಾದರೆ ನಮ್ಮಗೂ ಅಂಭ್ಯತರವಿಲ್ಲ. ಯಾರಿಗೆ ಒಪ್ಪಿಗೆ ಇದೆ ಅವರು ಅದನ್ನು ಫಾಲೋ ಮಾಡಿ, ಯಾರಿಗೆ ಒಪ್ಪಿಗೆ ಇಲ್ಲ ಅದರ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತರುತ್ತೇವೆ. 

Home add -Advt

ಮಾರ್ಗ ಬದಲಾವಣೆಗೆ ಒತ್ತಡ ಹಾಕಬೇಡಿ ಎಂದು ಸಭೆಯಲ್ಲಿ ತಿಳಿಸಿದ್ದೇವೆ, ಪಾರಂಪರಿಕ ಮಾರ್ಗಗಳಲ್ಲಿ ಮೆರವಣಿಗೆ ಸಾಗಬೇಕು. ಯಾರಿಗೆ ಇಷ್ಟ ಇದೆ ಅವರು ಮಾಡಿಕೊಳ್ಳಲ್ಲಿ. ಪಟಾಕಿ ಹಾರಿಸಬೇಡಿ ಎನ್ನಬೇಡಿ ಅಲ್ಲಿ ಗೋಠಿ ಆಡುವುದಿದಿದೆಯೇನು? ಎಂದು ಗರಂ ಆದರು.

ವಿಸರ್ಜನೆಗೊಳ್ಳುವ ಸ್ಥಳಗಳವರೆಗೆ ವಾಧ್ಯಮೇಳಗಳನ್ನು ತೆಗೆದುಕೊಂಡು ಹೋಗಲಿ. ಅದಕ್ಕೆ ಅವರು ಒಮ್ಮೆ ಗಣೇಶ ಮಂಡಳದವರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

Related Articles

Back to top button