Kannada NewsKarnataka NewsNationalWorld

*ಮಾದಕ ವಸ್ತು ನೀಡಿ ಲೈಂಗಿಕ ಸಂಬಂಧ:  ಮಹಿಳಾ ಅಧಿಕಾರಿಗೆ 30 ವರ್ಷ ಶಿಕ್ಷೆ*

ಪ್ರಗತಿವಾಹಿನಿ ಸುದ್ದಿ: ಪೊಲೀಸ್ ಅಧಿಕಾರಿ ಓರ್ವಳು ಶಿಕ್ಷಕಿಯಾಗಿದ್ದ ವೇಳೆ ತನ್ನ ವಿದ್ಯಾರ್ಥಿಗೆ ಮಾದಕ ವಸ್ತುಗಳನ್ನು ನೀಡಿ 20 ಕ್ಕೂ ಹೆಚ್ಚು ಸಲ ಲೈಂಗಿಕ ಸಂಪರ್ಕ ಹೊಂದಿರುವ ಆರೋಪದ ಮೇಲೆ ಕೋರ್ಟ್ 30 ವರ್ಷಗಳ ಶಿಕ್ಷೆ ವಿಧಿಸಿದೆ. 

ಮೆಲಿಸಾ ಕರ್ಟಿಸ್ (32) ಎಂಬಾಕೆಗೆ 30 ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿದೆ. ಮೇರಿಲ್ಯಾಂಡ್‌ನ ಈಕೆ ತನ್ನ ವಿದ್ಯಾರ್ಥಿ ಜತೆ ಬಹಳ ಸಲ ಲೈಂಗಿಕ ಸಂಬಂಧ ಹೊಂದಿದ್ದಳು. ಈಕೆ 2015ರ ಜನವರಿ-ಮೇ ಅವಧಿಯಲ್ಲಿ ವಾಹನ ಹಾಗೂ ಮನೆಗಳಲ್ಲಿ ಈ ಅಪರಾಧ ಎಸಗಿದ್ದಾಳೆ. ವಿದ್ಯಾರ್ಥಿಗೆ ಮದ್ಯ-ಮಾದಕವಸ್ತು ನೀಡಿ ಆತನೊಂದಿಗೆ 20ಕ್ಕೂ ಹೆಚ್ಚು ಸಲ ಲೈಂಗಿಕ ಕ್ರಿಯೆ ನಡೆಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

2 ವರ್ಷಗಳ ಕಾಲ ಶಿಕ್ಷಕಿ ಆಗಿದ್ದ ಈಕೆ ಬಳಿಕ 2023ರ ನ.7ರಂದು ಪೊಲೀಸ್ ಹುದ್ದೆಗೆ ಸೇರಿದ್ದಳು. ಈ ಮಧ್ಯೆ ಬಾಲಕನ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದು, ಜೂ. 20ರಂದು ಮೂರು ಸಲ ಮೂರನೇ ದರ್ಜೆ ಲೈಂಗಿಕ ಅಪರಾಧ ಎಸಗಿದ್ದಾಗಿ 2023ರ ಅಕ್ಟೋಬರ್‌ನಲ್ಲಿ ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಳು. ಈ ಸಂಬಂಧ ಈಕೆಗೆ 30 ವರ್ಷಗಳ ಶಿಕ್ಷೆ ವಿಧಿಸಲಾಗಿದೆ.

Home add -Advt

Related Articles

Back to top button