ಪ್ರಗತಿವಾಹಿನಿ ಸುದ್ದಿ: ನವದೆಹಲಿಯ ರಮೇಶ್ ನಗರ ಪ್ರದೇಶದಲ್ಲಿರುವ ಗೋದಾಮಿನಿಂದ ಸಾಗಿಸಲಾಗುತ್ತಿದ್ದ ನಿಷೇಧಿತ ಮಾದಕ ವಸ್ತು ಕಳ್ಳ ಜಾಲವನ್ನು ಪೊಲೀಸ್ ವಿಶೇಷ ತಂಡ ಭೇದಿಸಿದೆ.
ಭರ್ಜರಿ ಕಾರ್ಯಾಚರಣೆ ನಡೆಸಿರುವ ಖಾಕಿ ಟೀಂ, ಗೋದಾಮಿನಿಂದ ಸಾಗಿಸಲಾಗುತ್ತಿದ್ದ ಸುಮಾರು 200 ಕೆಜಿ ಕೊಕೇನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಕೇನ್ ಸಾಗಿಸಲು ಬಳಸಿದ್ದ ಕಾರಿನಲ್ಲಿ GPS ಅಳವಡಿಸಿ ಡ್ರಗ್ ದಂಧೆ ನಡೆಯುತಿತ್ತು. ಜಿಪಿಎಸ್ ಅಳವಡಿಸಿದ್ದರಿಂದ ನಿಖರ ಸ್ಥಳವನ್ನು ಟ್ಯಾಕ್ ಮಾಡಿ, ಡ್ರಗ್ಸ್ ಜಾಲವನ್ನು ಪೊಲೀಸರು ಬೇಟೆಯಾಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಕೊಕೇನ್ ಅನ್ನು ರಾಷ್ಟ್ರ ರಾಜಧಾನಿಗೆ ತಂದಿದ್ದ ಆರೋಪಿಗಳು ಲಂಡನ್‌ಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಅ.2ರಂದು ದಕ್ಷಿಣ ದೆಹಲಿಯ ಮಹಿಪಾಲ್‌ಪುರದ ಗೋದಾಮಿನಿಂದ 5,620 ಕೋಟಿ ರೂಪಾಯಿ ಮೌಲ್ಯದ 560 ಕೆಜಿ ಕೊಕೇನ್ ಮತ್ತು 40 ಕೆಜಿ ಹೈಡೋಪೋನಿಕ್ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದು ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ