GIT add 2024-1
Laxmi Tai add
Beereshwara 33

ಬಿಜೆಪಿ ಸಂಭವನೀಯ ಅಭ್ಯರ್ಥಿ ಮಹಾಂತೇಶ ಕವಟಗಿಮಠ

ಕವಟಗಿಮಠ ಆಯ್ಕೆಗೆ 11 ಪ್ರಮುಖ ಅಂಶಗಳು

Anvekar 3
Cancer Hospital 2

Pragativahini Exclusive

M.K.Hegde

ಎಂ.ಕೆ.ಹೆಗಡೆ, ಬೆಳಗಾವಿ – ಕೇಂದ್ರ ರೈಲ್ವೆ ಖಾತೆ ಸಚಿವರಾಗಿದ್ದ, ನಾಲ್ಕು ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಭಾರತೀಯ ಜನತಾ ಪಾರ್ಟಿ ಟಾಪ್ ಮೋಸ್ಟ್ ಆದ್ಯತೆ ನೀಡುತ್ತಿದೆ.

ಉಪಚುನಾವಣೆ ಯಾವುದೇ ಕ್ಷಣದಲ್ಲಿ ಘೋಷಣೆಯಾಗಬಹುದು. ಹಾಗಾಗಿ ಅಭ್ಯರ್ಥಿ ಆಯ್ಕೆಯನ್ನು ತಡಮಾಡಲು ಅವಕಾಶವೇ ಇಲ್ಲ. ಬಿಜೆಪಿ ಈಗಾಗಲೆ ಒಂದು ಹೆಸರನ್ನು ಫೈನಲ್ ಮಾಡಿ ಇಟ್ಟುಕೊಂಡಿದೆ. ಮಹತ್ವದ ಕಾರಣಗಳಿಗಾಗಿ ಬದಲಾವಣೆಯಾಗದಿದ್ದಲ್ಲಿ ಇದೇ ಅಂತಿಮ ಎನ್ನುವ ನಿರ್ಧಾರದಲ್ಲಿ ಪಕ್ಷವಿದೆ.

ಕಾಂಗ್ರೆಸ್ ಕೂಡ ಈಗಾಗಲೆ ಹಲವು ಸುತ್ತಿನ ಸಭೆ ನಡೆಸಿದ್ದು, ಅಭ್ಯರ್ಥಿಯನ್ನು ಅಂತಿಮಗೊಳಿಸುವ ಪ್ರಯತ್ನ ನಡೆಸಿದೆ. ಬಿಜೆಪಿ ಅಭ್ಯರ್ಥಿ ಯಾರಾಗಬಹುದು ಎನ್ನುವುದನ್ನು ನೋಡಿಕೊಂಡು ನಿರ್ಧರಿಸಬಹುದು.

ಬೆಳಗಾವಿ ಲೋಕಸಭಾ ಕ್ಷೇತ್ರ ಮೊದಲು ಕಾಂಗ್ರೆಸ್ ಕೈಯಲ್ಲಿತ್ತು. ಎಸ್.ಬಿ.ಸಿದ್ನಾಳ 4 ಬಾರಿ ಆಯ್ಕೆಯಾಗಿದ್ದರು. ನಂತರ ಒಂದು ಬಾರಿ ಬಿಜೆಪಿಯ ಬಾಬಾಗೌಡ ಪಾಟೀಲ ಗೆದ್ದು ಬಂದರು. ಮತ್ತೆ ಕಾಂಗ್ರೆೇಸ್ ನ ಅಮರಸಿಂಹ ಪಾಟೀಲ ಗೆದ್ದಿದ್ದರು. 2004ರಿಂದ ಕ್ಷೇತ್ರ ಬಿಜೆಪಿ ವಶವಾಯಿತು. ಸುರೇಶ ಅಂಗಡಿ ಸತತವಾಗಿ ನಾಲ್ಕು ಚುನಾವಣೆಗಳನ್ನೂ ಗೆಲುವು ಸಾಧಿಸಿದ್ದರು.

ಈಗಲೂ ಸುರೇಶ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಬೇಕೆನ್ನುವ ಕೂಗು ಕೇಳಿಬರುತ್ತಿದೆ. ಅನುಕಂಪ ಮತ್ತು ಸುರೇಶ ಅಂಗಡಿ ನಾಲ್ಕನೇ ಅವಧಿಯಲ್ಲಿ, ಕೇಂದ್ರದ ರೈಲ್ವೆ ಖಾತೆ ಸಚಿವರಾಗಿ ಮಾಡಿರುವ ಕೆಲಸಗಳನ್ನು ಗಮನಿಸಿ ಟಿಕೆಟ್ ನೀಡಬೇಕು ಎನ್ನುವ ವಾದ ಕುಟುಂಬ ವಲಯದಿಂದ ಬರುತ್ತಿದೆ. ಬಿಜೆಪಿಯ ಅನೇಕ ಮುಖಂಡರೂ ಬಹಿರಂಗವಾಗಿ ಅಂಗಡಿ ಕುಟುಂಬದ ಪರವಾಗಿ ಹೇಳಿಕೆ ನೀಡಿದ್ದಾರೆ.

ಆದರೆ, ಈಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಂಶಪಾರಂಪರ್ಯ ಇನ್ನು ಮುಂದೆ ನಡೆಯುವುದಿಲ್ಲ. ರಾಜಕೀಯ ಯಾರದ್ದೂ ಆಸ್ತಿಯಲ್ಲ ಎನ್ನುವ ಸ್ಪಷ್ಟ ಸಂದೇಶ ನೀಡಿ ಹೋಗಿದ್ದಾರೆ. ಹಾಗಾಗಿ ಅಂಗಡಿ ಕುಟುಂಬದ ಆಸೆ ಕ್ಷೀಣಿಸಿದೆ.

ಬಿಜೆಪಿ ಆ ಮೂವರನ್ನು ಉಸ್ತುವಾರಿ ಮಾಡಿದ್ದೇಕೆ?; ಬೆಳಗಾವಿಗೆ ಸಂಭವನೀಯ ಅಭ್ಯರ್ಥಿ ಯಾರು?

Emergency Service

ಮಹಾಂತೇಶ ಕವಟಗಿಮಠ ಹೆಸರು ಟಾಪ್ 1

ಬಿಜೆಪಿಯಲ್ಲಿ 25ಕ್ಕೂ ಹೆಚ್ಚು ಜನರು ಟಿಕೆಟ್ ಗಾಗಿ ಲಾಬಿ ನಡೆಸಿದ್ದಾರೆ. ಮಾಜಿ ಸಂಸದರು, ಮಾಜಿ ಶಾಸಕರು, ವಿವಿಧ ಹುದ್ದಗಳಲ್ಲಿರುವವರು, ಪಕ್ಷಕ್ಕಾಗಿ ಕೆಲಸ ಮಾಡಿದವರು, ಸಂಘಪರಿವಾರದಲ್ಲಿ ದುಡಿದವರು, ಈಗಷ್ಟೆ ರಾಜಕೀಯಕ್ಕೆ ಕಾಲಿಡುತ್ತಿರುವವರು ಎಲ್ಲರೂ ಟಿಕೆಟ್ ಕೇಳುತ್ತಿದ್ದಾರೆ. ಬಿಜೆಪಿ ಹೊಸ ಮುಖಗಳಿಗೆ ಅವಕಾಶ ನೀಡಬಹುದು ಎನ್ನುವ ಸುದ್ದಿಯ ಹಿನ್ನೆಲೆಯಲ್ಲಿ ಹೊಸಬರೂ ಅನೇಕರು ಟವೆಲ್ ಹಾಕುತ್ತಿದ್ದಾರೆ.

ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಅಭ್ಯರ್ಥಿ ಆಯ್ಕೆಗೆ ಕೈ ಹಾಕಿದೆ. ಹಾಗಾಗಿ ಈಗ ಕೇಳಿ ಬಂದಿರುವ ಎಲ್ಲ ಹೆಸರುಗಳನ್ನು ಬದಿಗೊತ್ತಿ ವಿಧಾನಪರಿಷತ್ ಸದಸ್ಯ, ವಿಧಾನಪರಿಷತ್ತಿನ ಹಾಲಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರನ್ನು ಕಣಕ್ಕಿಳಿಸಲು ಪಕ್ಷ ಮುಂದಾಗಿದೆ.

ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಮಹಾಂತೇಶ ಕವಟಗಿಮಠ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.  ಪ್ರಮುಖ ಘಟನೆಗಳೇನೂ ನಡೆಯದಿದ್ದಲ್ಲಿ, ಮಹತ್ವದ ಬೆಳವಣಿಗೆ ಏನಾದರೂ ಆಗದಿದ್ದಲ್ಲಿ ಕವಟಗಿಮಠ ಅವರೇ ಅಭ್ಯರ್ಥಿಯಾಗಲಿದ್ದಾರೆ.

ಮಹಾಂತೇಶ ಕವಟಗಿಮಠ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಪಕ್ಷ ಮುಂದಾಗಿರುವುದಕ್ಕೆ ಕಾರಣಗಳು ಹೀಗಿವೆ:

  1. ಕ್ಷೇತ್ರದಲ್ಲಿ ಹೆಚ್ಚಾಗಿರುವ ಲಿಂಗಾಯತ ಸಮುದಾಯದವರು.
  2. ಕ್ಲೀನ್ ಇಮೇಜ್ ಹೊಂದಿದ್ದಾರೆ, ವಿವಾದಗಳಿಲ್ಲ.
  3. ಸಂಘ ಪರಿವಾರದೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ.
  4.   ಅವರಿಗೂ ಕ್ಷೇತ್ರದ ಪರಿಚಯವಿದೆ, ಕ್ಷೇತ್ರಕ್ಕೂ ಇವರ ಪರಿಚಯವಿದೆ.
  5.   ಎಲ್ಲರೊಂದಿಗೂ ಹೊಂದಾಣಿಕೆ ಸ್ವಭಾವ.
  6.  ಎಲ್ಲ ಶಾಸಕರು, ಕಾರ್ಯಕರ್ತರು ವಿರೋಧಿಸದೆ ಒಪ್ಪಿಕೊಳ್ಳುತ್ತಾರೆ.
  7. ವಿಧಾನ ಪರಿಷತ್ ಸದಸ್ಯರಾಗಿ ಕ್ರಿಯಾಶೀಲರಾಗಿ ಓಡಾಡಿದ್ದಾರೆ, ಕೆಲಸ ಮಾಡುತ್ತಿದ್ದಾರೆ.
  8. ಪಕ್ಷದೊಳಗೆ ಎಲ್ಲರೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದಾರೆ.
  9. ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ನಿರ್ದೇಶಕರಾಗಿ ಎಲ್ಲ ಕಡೆ ನೆಟ್ ವರ್ಕ್ ಹೊಂದಿದ್ದಾರೆ.
  10. ಆರ್ಥಿಕವಾಗಿಯೂ ಪ್ರಬಲರಾಗಿದ್ದಾರೆ.
  11. ರಾಜಕೀಯ ಕುಟುಂಬದಿಂದ ಬಂದವರು, ಸುದೀರ್ಘ ರಾಜಕೀಯ ಅನುಭವ ಹೊಂದಿರುವವರು.

————————-

ಮಹಾಂತೇಶ ಕವಟಗಿಮಠ ಅವರ ಕುರಿತು ಈ ಹಿಂದೆ ಪ್ರಗತಿವಾಹಿನಿ ಪ್ರಕಟಿಸಿರುವ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ –

ರಾಜಕೀಯದ ಮೂಲಕ ಸಮಾಜ ಸೇವೆ; ಮೃಧು, ಸರಳ ವ್ಯಕ್ತಿತ್ವದ ಮಹಾಂತೇಶ ಕವಟಗಿಮಠ

ರಾಜಕೀಯದಲ್ಲೂ ಸುಸಂಸ್ಕೃತ ನಡೆ –ಮಹಾಂತೇಶ ಕವಟಗಿಮಠ

 

Bottom Add3
Bottom Ad 2